ADVERTISEMENT

ಕೊಡವ ಧರ್ಮ ಎಂದು ಬರೆಸಬೇಡಿ: ಮನು ಮುತ್ತಪ್ಪ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 0:07 IST
Last Updated 21 ಸೆಪ್ಟೆಂಬರ್ 2025, 0:07 IST
<div class="paragraphs"><p>ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಪ್ರಾತಿನಿಧಿಕ ಚಿತ್ರ)</p></div>

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಪ್ರಾತಿನಿಧಿಕ ಚಿತ್ರ)

   

ಮಡಿಕೇರಿ: ‘ಕೊಡವ ಪ್ರತ್ಯೇಕ ಧರ್ಮ ಅಲ್ಲ. ಕೊಡವ ಸಮುದಾಯದವರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ‘ಹಿಂದೂ ಧರ್ಮ, ಕೊಡವ ಜಾತಿ’ ಎಂದೇ ನಮೂದಿಸಬೇಕು’ ಎಂದು ನಾಪೋಕ್ಲು ಕೊಡವ ಸಮಾಜದ ಮಾಜಿ ಅಧ್ಯಕ್ಷ ಮನು ಮುತ್ತಪ್ಪ ಕೋರಿದರು.

‘ಕೊಡವ ಎಂಬುದು ಪ್ರತ್ಯೇಕ ಧರ್ಮ ಎಂದು ಕೆಲವರು ಗೊಂದಲ ಸೃಷ್ಟಿಸುತ್ತಿದ್ದಾರೆ. ಕಾವೇರಿ ಮಾತೆ, ಇಗ್ಗುತ್ತಪ್ಪ ದೇವರು ಹಾಗೂ ಭಗವತಿದೇವಿ ಆರಾಧನೆಗಳಲ್ಲಿ ಹಿಂದೂ ಧರ್ಮದ ಕ್ರಿಯಾವಿಧಿಗಳನ್ನೇ ಪಾಲಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಕೊಡವ ಸಮುದಾಯವು ವಿಶಿಷ್ಟ ಪರಂಪರೆ ಹೊಂದಿದೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಅಖಿಲ ಕೊಡವ ಸಮಾಜ ಕಾರ್ಯದರ್ಶಿ ವಾಟೇರಿರ ಶಂಕರಿ ಪೊನ್ನಪ್ಪ, ದೇಶ ತಕ್ಕ ಬೊಳ್ಳೇರ ವಿನಯ್ ಅಪ್ಪಯ್ಯ, ಮಡಿಕೇರಿ ಕೊಡವ ಸಮಾಜ ಮಾಜಿ ಅಧ್ಯಕ್ಷ ಕೊಂಗಂಡ ದೇವಯ್ಯ, ಮುಖಂಡರಾದ ಎಂ.ಬಿ‌. ದೇವಯ್ಯ ಹಾಗೂ ಮಾಚಿಮಾಡ ರವೀಂದ್ರ ದನಿಗೂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.