ADVERTISEMENT

ಕುಂಜಿಲ: ಸಂಭ್ರಮದ ರಾತೀಬ್, ಧುವಾ ಮಜ್ಲಿಸ್

​ಪ್ರಜಾವಾಣಿ ವಾರ್ತೆ
Published 4 ಜೂನ್ 2024, 2:23 IST
Last Updated 4 ಜೂನ್ 2024, 2:23 IST
ನಾಪೋಕ್ಲು ಸಮೀಪದ ಕುಂಜಿಲದಲ್ಲಿ ನಾಲ್ಕನೇ ವರ್ಷದ ಗ್ರಾಂಡ್ ರಾತೀಬ್ ಹಾಗೂ ದುವಾ ಮಜ್ಲಿಸ್ ಪಯ್ಯಡಿ ಹಂಸ ಅವರ ಮನೆಯಲ್ಲಿ ನಡೆಯಿತು
ನಾಪೋಕ್ಲು ಸಮೀಪದ ಕುಂಜಿಲದಲ್ಲಿ ನಾಲ್ಕನೇ ವರ್ಷದ ಗ್ರಾಂಡ್ ರಾತೀಬ್ ಹಾಗೂ ದುವಾ ಮಜ್ಲಿಸ್ ಪಯ್ಯಡಿ ಹಂಸ ಅವರ ಮನೆಯಲ್ಲಿ ನಡೆಯಿತು    

ನಾಪೋಕ್ಲು: ಸಮೀಪದ ಕುಂಜಿಲದ ಪಯ್ಯಡಿ ಕುಟುಂಬಸ್ಥರು ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವ ನಾಲ್ಕನೇ ವರ್ಷದ ಗ್ರಾಂಡ್ ರಾತೀಬ್ ಹಾಗೂ ದುವಾ ಮಜ್ಲಿಸ್ ಪಯ್ಯಡಿ ಹಂಸ ಅವರ ಮನೆಯಲ್ಲಿ ಸಂಭ್ರಮದಿಂದ ನಡೆಯಿತು.

ಕುಂಜಿಲ ಖುತುಬುಲ್ ಆರಿಫೀನ್ ರಾತೀಬ್ ಸಂಘ ರಾತೀಬ್ ಮಜ್ಲಿಸ್‌ಗೆ ನೇತೃತ್ವ ವಹಿಸಿ ಸ್ಥಳೀಯ ಖತೀಬರಾದ ನಿಝಾರ್ ಅಹ್ಸನಿ ಕಕ್ಕಡಿಪುರಮ್ ಉಸ್ತಾದರ ದುವಾ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕ ಸಂಖ್ಯೆಯಲ್ಲಿ ಕುಟುಂಬಸ್ಥರು ಹಾಗೂ ಊರಿನ ಸಮಾಜ ಬಾಂಧವರು ಪಾಲ್ಗೊಂಡಿದ್ದರು. ಹುಸೇನ್ ಉಸ್ತಾದ್ ಸರ್ವರಿಗೂ ಶುಭವನ್ನು ಕೋರಿದರು. ಮೂಸಾ ಮುಂದಿನ ವರ್ಷ ರಾತೀಬ್ ಅನ್ನು ಅತ್ಯಂತ ವಿಜೃಂಭಣೆಯಿಂದ ನಡೆಸುದಾಗಿ ತಿಳಿಸಿದರು. ಸುಲೇಮಾನ್ ದಾರಿಮಿ ಅಧ್ಯಕ್ಷ ಹಂಸ, ಹಸನ್, ಸಿರಾಜ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT