ADVERTISEMENT

ಕುಶಾಲನಗರ | ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆ ಮುಖ್ಯ: ಕುಲಪತಿ

ಕುಲಪತಿ ಡಾ ಅಶೋಕ್ ಸಂಗಪ್ಪ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 15:55 IST
Last Updated 30 ಏಪ್ರಿಲ್ 2025, 15:55 IST
ಕುಶಾಲನಗರದಿಂದ ಬೆಂಗಳೂರಿಗೆ ವರ್ಗಾವಣೆಗೊಂಡ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ ಅವರಿಗೆ  ಪ್ರಜ್ಞಾವಂತ ನಾಗರಿಕ ವೇದಿಕೆಯಿಂದ ಬೀಳ್ಕೊಡುಗೆ ನೀಡಲಾಯಿತು. ಕೊಡಗು ವಿ.ವಿ.ಕುಲಪತಿ  ಅಶೋಕ ಸಂಗಪ್ಪ ಆಲೂರ, ವೇದಿಕೆಯ ಅಧ್ಯಕ್ಷ ವಿ.ಪಿ.ಶಶಿಧರ್, ಕೆ.ಪಿ.ಚಂದ್ರಕಲಾ, ಟಿ.ಆರ್.ಶರವಣಕುಮಾರ್, ಎಸ್.ಕೆ.ಸತೀಶ್, ಆನಂದಕುಮಾರ್, ನಾಗೇಶ್  ಭಾಗವಹಿಸಿದ್ದರು.
ಕುಶಾಲನಗರದಿಂದ ಬೆಂಗಳೂರಿಗೆ ವರ್ಗಾವಣೆಗೊಂಡ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ ಅವರಿಗೆ  ಪ್ರಜ್ಞಾವಂತ ನಾಗರಿಕ ವೇದಿಕೆಯಿಂದ ಬೀಳ್ಕೊಡುಗೆ ನೀಡಲಾಯಿತು. ಕೊಡಗು ವಿ.ವಿ.ಕುಲಪತಿ  ಅಶೋಕ ಸಂಗಪ್ಪ ಆಲೂರ, ವೇದಿಕೆಯ ಅಧ್ಯಕ್ಷ ವಿ.ಪಿ.ಶಶಿಧರ್, ಕೆ.ಪಿ.ಚಂದ್ರಕಲಾ, ಟಿ.ಆರ್.ಶರವಣಕುಮಾರ್, ಎಸ್.ಕೆ.ಸತೀಶ್, ಆನಂದಕುಮಾರ್, ನಾಗೇಶ್  ಭಾಗವಹಿಸಿದ್ದರು.   

ಕುಶಾಲನಗರ : ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆ ಹಾಗೂ ಜನಪರ ಕೆಲಸ ಮಾಡಿದವರನ್ನು ಸಮಾಜ ಸದಾ ಸ್ಮರಿಸುತ್ತದೆ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ  ಅಶೋಕ್ ಸಂಗಪ್ಪ ಆಲೂರ ಹೇಳಿದರು.

ಸೋಮವಾರಪೇಟೆಯಿಂದ ಬೆಂಗಳೂರಿಗೆ ವರ್ಗಾವಣೆ ಆಗಿರುವ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ ಅವರನ್ನು ಗೌರವಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  ಕುಶಾಲನಗರದ ಜನ ಒಗ್ಗೂಡಿ ನಾಗರಿಕ ಸನ್ಮಾನ ಮಾಡುತ್ತಿರುವುದೇ ಡಿವೈಎಸ್ಪಿ ಗಂಗಾಧರಪ್ಪ ಅವರ ಉತ್ತಮ ಸೇವೆಗೆ ದ್ಯೋತಕ  ಎಂದರು.

ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಅಧ್ಯಕ್ಷತೆ ವಹಿಸಿ, ಜನಸ್ನೇಹಿ ಅಧಿಕಾರಿ ಜನಮಾನಸದಲ್ಲಿ ಸದಾ ಹಸಿರಾಗಿ ಉಳಿಯುತ್ತಾರೆ ಎಂದರು. ಕಾಂಗ್ರೆಸ್ ಮುಖಂಡರಾದ ಕೆ.ಪಿ.ಚಂದ್ರಕಲಾ ಮಾತನಾಡಿ, ಗಂಗಾಧರಪ್ಪ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ಮಾತನಾಡಿ, ಇವರು  ಅಧಿಕಾರಿಗಳಿಗೆ ಮಾದರಿ ಎಂದರು.

ADVERTISEMENT

 ಗಂಗಾಧರಪ್ಪ ಮತ್ತು ಅವರ ಪತ್ನಿ ಪ್ರಿಯಾಂಕ ಅವರನ್ನು  ಗೌರವಿಸಲಾಯಿತು. ಅವರು ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ವೃತ್ತಿ  ‌ತೃಪ್ತಿ ತಂದಿದೆ  ಎಂದರು. ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರು, ತಾಲ್ಲೂಕು ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಎಸ್.ಕೆ.ಸತೀಶ್, ನಿವೃತ್ತ ಮುಖ್ಯೋಪಾಧ್ಯಾಯ ಎಂ.ಎಚ್.ನಜೀರ್ ಅಹ್ಮದ್, ನಗರ ಚೇಂಬರ್ ಆಫ್ ಕಾಮರ್ಸ್  ಸ್ಥಾನೀಯ ಸಮಿತಿ ಅಧ್ಯಕ್ಷ ಕೆ.ಎಸ್.ನಾಗೇಶ್, ಪುರಸಭೆ ಸದಸ್ಯ ವಿ.ಎಸ್.ಆನಂದಕುಮಾರ್, ಎ.ಪಿ.ಸಿ.ಎಂ.ಎಸ್.ನ ಉಪಾಧ್ಯಕ್ಷ ದೊಡ್ಡಯ್ಯ, .ಕೆ.ಎಸ್.ಮೂರ್ತಿ, ಉಪನ್ಯಾಸಕ ಜಮೀಲ್ ಅಹ್ಮದ್, ಶಿಕ್ಷಕಿ ಗಾಯತ್ರಿ , ಟಿ.ಜಿ.ಪ್ರೇಮಕುಮಾರ್, ಕಲಾವಿದ ಬಿ.ಎಸ್.ಲೋಕೇಶ್ ಸಾಗರ್  ಪಾಲ್ಗೊಂಡಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.