
ಕುಶಾಲನಗರ : ಹೆಬ್ಬಾಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸಂಕ್ರಾಂತಿಯನ್ನು ಬುಧವಾರ ಸಡಗರದಿಂದ ಆಚರಿಸಲಾಯಿತು.
ಶಾಲಾ ಮೈದಾನದಲ್ಲಿ ಎಳ್ಳು, ಬೆಲ್ಲ, ಭತ್ತ, ಕಬ್ಬು, ಗೆಣಸು, ಅವರೆಕಾಳು ಸೇರಿದಂತೆ ವಿವಿಧ ಬಗೆಯ ಕೃಷಿ ಉತ್ಪನ್ನ, ತಿನಿಸುಗಳನ್ನು ಪ್ರದರ್ಶಿಸಲಾಯಿತು. ಶಾಲಾ ಮಕ್ಕಳು ಗೋಪೂಜೆ, ಧಾನ್ಯಗಳನ್ನು ಪೂಜಿಸಿದರು.
ಮುಖ್ಯ ಶಿಕ್ಷಕ ಎಚ್. ಎಂ.ವೆಂಕಟೇಶ್ ಮಾತನಾಡಿ, ಹಿಂದೂ ಧರ್ಮೀಯರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಮಕರ ಸಂಕ್ರಾಂತಿಯೂ ಒಂದು. ಹೊಸ ವರ್ಷದ ಮೊದಲ ಹಬ್ಬ ಸೂರ್ಯ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ ಎಂದರು.
ನಿವೃತ್ತ ಎಂಜಿನಿಯರ್ ಜಿ.ಎಲ್. ರಾಮಪ್ಪ ಮಾತನಾಡಿ, ಸಂಕ್ರಾಂತಿ ಪ್ರಕೃತಿಗೆ ಕೃತಜ್ಞತೆ ಸಲ್ಲಿಸುವ ಹಬ್ಬವಾಗಿದೆ. ಎಳ್ಳು ಬೆಲ್ಲದಂತೆ ಜೀವನದಲ್ಲಿ ಸಿಹಿ ಕಹಿ ಎರಡನ್ನು ಸಮಾನವಾಗಿ ಸ್ವೀಕರಿಸುವ ಸಂದೇಶವನ್ನು ಸಂಕ್ರಾಂತಿ ನಮಗೆ ನೀಡುತ್ತದೆ ಎಂದು ಹೇಳಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷವಪ್ರದೀಪ್ ಅಧ್ಯಕ್ಷತೆ ವಹಿಸಿದ್ದರು.
ಸಂಯುಕ್ತ ಪದವಿಪೂರ್ವ ಕಾಲೇಜು ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಸವರಾಜ್ ಶೆಟ್ಟಿ, ಕನ್ನಡ ಅಧ್ಯಾಪಕ ಮೆ.ನಾ. ವೆಂಕಟ ನಾಯಕ್, ಊರಿನ ಹಿರಿಯರು ನಿಂಗಪ್ಪ , ನಿವೃತ್ತ ಶಿಕ್ಷಕ ಪುಟ್ಟರಾಜು, ರಮೇಶ್, ಶಿಕ್ಷಕಿ ಕವಿತಾ, ಶಿಕ್ಷಣ ಸಂಯೋಜಕಿ ರಾಜಕುಮಾರಿ, ಸಿಆರ್‌ಪಿ ಆದರ್ಶ, ಪ್ರಾಥಮಿಕ ಶಾಲೆಯ ಶಿಕ್ಷಕಿ ಸಿ.ಎಂ.ಬಬಿತ, ದೈಹಿಕ ಶಿಕ್ಷಣ ಶಿಕ್ಷಕಿ ವಂಜಮ್ಮ, ಶಿಕ್ಷಕರಾದ ಶಿವಾನಂದ, ಕೆ.ಎಸ್.ರಮ್ಯಾ, ರಕ್ಷಿತಾ, ಸಿಬ್ಬಂದಿ ವಿನೀತ, ಮಂಜಮ್ಮ, ಪೋಷಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.