ADVERTISEMENT

ಮಡಿಕೇರಿ ದಸರೆಗೆ ವೈಭವದ ತೆರೆ: ದಶಮಂಟಪ ಶೋಭಾಯಾತ್ರೆ

ಕೆ.ಎಸ್.ಗಿರೀಶ್
Published 5 ಅಕ್ಟೋಬರ್ 2022, 20:54 IST
Last Updated 5 ಅಕ್ಟೋಬರ್ 2022, 20:54 IST
   

ಮಡಿಕೇರಿ: ರಾತ್ರಿಯನ್ನೇ ಹಗಲಾಗಿಸಿದ ಮಂಜಿನ ನಗರಿಯ ‘ಬೆಳಕಿನ ದಸರೆ’ಯು ಎರಡು ವರ್ಷಗಳ ನಂತರ ಬುಧವಾರ ವೈಭವೋಪೇತವಾಗಿ ನಡೆಯಿತು.

‘ಬೆಳಕಿನ ಹೊಳೆ’ಯಲ್ಲಿ ದಶಮಂಟ ಪಗಳು ತೇಲಿದವು. ₹ 1.76 ಕೋಟಿ ವೆಚ್ಚದಲ್ಲಿ ಸಿದ್ಧಪಡಿಸಿದ್ದ ಹತ್ತು ಮಂಟಪ ಗಳ ಶೋಭಾಯಾತ್ರೆಯನ್ನು ಲಕ್ಷಾಂತರ ಮಂದಿ ಕಣ್ತುಂಬಿಕೊಂಡರು. ಹತ್ತು ದಿನಗಳ ದಸರೆಗೆ ವೈಭವದ ತೆರೆ ಬಿತ್ತು.

ಪಡುವಣದಲ್ಲಿ ಸೂರ್ಯ ಮುಳುಗುತ್ತಿದ್ದಂತೆ ಜಂಬೂಸವಾರಿ ಮುಗಿಸಿ ಮೈಸೂರಿನಿಂದ ಬಂದ ಅಪಾರ ಜನಸ್ತೋಮ ಬೀದಿಬೀದಿಗಳಲ್ಲಿ ಕಂಡು ಬಂದರು. ಕಿವಿಗಡಚಿಕ್ಕುವ ಡಿ.ಜೆ ಸಂಗೀತದ ಅಬ್ಬರಕ್ಕೆ ಯುವಜನರು ಕುಣಿದು ಕುಪ್ಪಳಿಸಿದರು. 150 ವರ್ಷಗಳಿಗೂ ಮೀರಿದ ಇತಿಹಾಸ ಹೊಂದಿರುವ ನಗರದ ಪೇಟೆ ಶ್ರೀರಾಮ ಮಂದಿರ ಸಮಿತಿಯ ‘ಶಿವದರ್ಶನ’ ಮಂಟಪ ಮುಂದಡಿ ಇಡುತ್ತಿದ್ದಂತೆ ಶೋಭಾ ಯಾತ್ರೆ ಆರಂಭ ಗೊಂಡಿತು.

ADVERTISEMENT

ಉಳಿದ ಮಂಟಪಗಳಾದ ದೇಚೂರು ಶ್ರೀರಾಮಂದಿರವು ‘ಮಧು ಕೈಟಭರ ವಧೆ’, ದಂಡಿನ ಮಾರಿಯಮ್ಮ ಸಮಿತಿಯು ‘ಭೂಲೋಕ ರಕ್ಷಣೆಗೆ ಪಾರ್ವತಿಯಿಂದ ಶಾಕಂಭರಿ ರೂಪ‘ ಕಥಾನಕವನ್ನು ಪ್ರಸ್ತುತಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.