ಮಡಿಕೇರಿ: ಸಿದ್ದಾಪುರ ಸಮೀಪದ ಅಭ್ಯತ್‌ಮಂಗಲದ ಕಾಫಿ ತೋಟದಲ್ಲಿ ಕೊಳಂಬೆ ವಿನು ಬೆಳ್ಳಿಯಪ್ಪ (53) ಅವರ ಮೇಲೆ ಅಣ್ಣ ಸುಬ್ಬಯ್ಯ (72) ಎಂಬುವರು ಗುಂಡು ಹಾರಿಸಿ ಮಂಗಳವಾರ ಕೊಲೆ ಮಾಡಿದ್ದಾರೆ.
‘ವಿನು ಬೆಳ್ಳಿಯಪ್ಪ ಅವರು ತೋಟದಲ್ಲಿ ಕೆಲಸ ಮಾಡುವಾಗ ಸುಬ್ಬಯ್ಯ ಗುಂಡು ಹಾರಿಸಿದ್ದಾರೆ. ಮೃತರ ಪತ್ನಿ ದೂರು ನೀಡಿದ್ದು, ಆರೋಪಿ ಸುಬ್ಬಯ್ಯ ಅವರನ್ನು ಬಂಧಿಸಲಾಗಿದೆ. ಆಸ್ತಿ ಕಲಹದಿಂದ ಆರೋಪಿ ಈ ಕೃತ್ಯ ಎಸಗಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.