ಮಡಿಕೇರಿ: ಮಡಿಕೇರಿ ದಸರೆಯಲ್ಲಿ ಮಕ್ಕಳ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಸೆ. 30ರಂದು ಬೆಳಿಗ್ಗೆ 9.30ಕ್ಕೆ 12ನೇ ವರ್ಷದ ಮಕ್ಕಳ ದಸರೆ ಗಾಂಧಿ ಮೈದಾನದಲ್ಲಿ ನಡೆಯಲಿದೆ.
ಎಸ್‌ಎಸ್‌ಎಲ್‌ಸಿ ಒಳಗಿನ ವಿದ್ಯಾರ್ಥಿಗಳಿಗಾಗಿ ನಡೆಯುವ ಮಕ್ಕಳ ಸಂತೆಯಲ್ಲಿ ಒಂದು ತಂಡದಲ್ಲಿ ಗರಿಷ್ಠ 5 ವಿದ್ಯಾರ್ಥಿಗಳು, ಮಕ್ಕಳ ಅಂಗಡಿಯಲ್ಲಿ ಗರಿಷ್ಠ ಇಬ್ಬರು ಸ್ಪರ್ಥಿಗಳಿಗೆ ಅವಕಾಶವಿದೆ. ಮಾಹಿತಿಗೆ ಮೊ: 9880316841, 9741523484 ಸಂಪರ್ಕಿಸಬಹುದು
10 ನಿಮಿಷದ ಪ್ರದರ್ಶನಾವಧಿಯುಳ್ಳ ಮಂಟಪ ಸ್ಪರ್ಧೆಯಲ್ಲಿ ಒಂದು ತಂಡದಲ್ಲಿ 6 ಮಕ್ಕಳು ಪಾಲ್ಗೊಳ್ಳಬಹುದು. ಯಾವುದೇ ಕಾರಣಕ್ಕೂ ಮಂಟಪದಲ್ಲಿ ವಿದ್ಯುತ್ ಮತ್ತು ಬೆಂಕಿಯಂಥ ಅಪಾಯಕಾರಿ ವಸ್ತುಗಳನ್ನು ಬಳಸಿ ಪ್ರದರ್ಶನ ನೀಡುವಂತಿಲ್ಲ. ಮಾಹಿತಿಗೆ 9902362038
ಎಲ್‌ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳ ವಿಭಾಗ, 1 ನೇ ತರಗತಿಯಿಂದ 4 ನೇ ತರಗತಿ, 5 ರಿಂದ 7 ನೇ ತರಗತಿಗಳ ಮಕ್ಕಳಿಗೆ ಪ್ರತ್ಯೇಕ ವಿಭಾಗಗಳಲ್ಲಿ ಛದ್ಮವೇಷ ಸ್ಪಧೆ೯ಗಳು ನಡೆಯಲಿದ್ದು, ವಸ್ತ್ರಾಲಂಕಾರಕ್ಕೆ ಆದ್ಯತೆಯಿದೆ. 5 ರಿಂದ 7 ನೇ ತರಗತಿ ಹಾಗೂ 8 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗಾಗಿ ಕ್ಲೇ ಮಾಡೆಲಿಂಗ್ ಸ್ಪರ್ಧೆ ನಡೆಯಲಿದೆ. ಮಾಹಿತಿಗೆ 9448976405, 9538101863 ಸಂಪರ್ಕಿಸಬಹುದು.
ಎಲ್ಲಾ ಸ್ಪರ್ಧೆಗಳಿಗೆ ಸೆ. 20ರ ಒಳಗೆ ಹೆಸರು ನೋಂದಾಯಿಸಬೇಕು ಎಂದು ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ ಮತ್ತು ಮಕ್ಕಳ ದಸರಾ ಸಂಚಾಲಕ ಎಚ್.ಟಿ.ಅನಿಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.