ADVERTISEMENT

ಮಡಿಕೇರಿಯಲ್ಲಿ ತಗ್ಗಿದ ಮಳೆ ಅಬ್ಬರ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 3:02 IST
Last Updated 13 ಜುಲೈ 2025, 3:02 IST
<div class="paragraphs"><p>ಮಡಿಕೇರಿಯಲ್ಲಿ ಮಳೆ ತಗ್ಗಿದೆ</p></div>

ಮಡಿಕೇರಿಯಲ್ಲಿ ಮಳೆ ತಗ್ಗಿದೆ

   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಶನಿವಾರ ಮಳೆಯ ಪ್ರಮಾಣ ತಗ್ಗಿದೆ. ಶುಕ್ರವಾರದವರೆಗೂ ಆಗಾಗ ನಗರದಲ್ಲಿ ಅಬ್ಬರಿಸುತ್ತಿದ್ದ ವರುಣ ಶನಿವಾರ ಶಾಂತವಾಯಿತು.

ಶನಿವಾರ ನಸುಕು ಮತ್ತು ಬೆಳಿಗ್ಗೆ ಸಾಧಾರಣ ಮಳೆಯಾದರೂ, ನಂತರ ಮಳೆ ಇರಲಿಲ್ಲ. ಆದರೆ, ದಿನವಿಡೀ ದಟ್ಟ ಮೋಡ ಕವಿದ ವಾತಾವರಣವಿದ್ದು, ಇನ್ನೇನೂ ಮಳೆ ಬರಬಹುದು ಎಂಬಂತಿತ್ತು. ಆದರೆ, ಮಳೆ ಹನಿಗಳು ಉದುರಲಿಲ್ಲ.

ADVERTISEMENT

ಇಲ್ಲಿಯವರೆಗೂ ನಿರಂತರ ಮಳೆಯಾಗುತ್ತಿದ್ದು, ಸದ್ಯ ಒಂದು ದಿನ ಮಳೆ ಬಿಡುವು ನೀಡಿದ್ದರಿಂದ ತುಸು ಆರಿದ ನೆಲ ಕಂಡುಬಂತು.

ಶೀತಗಾಳಿ ಬಿರುಸು ಇಲ್ಲದಿದ್ದರೂ ಮುಂದುವರಿದಿದೆ. ಇದರಿಂದ ನಗರದಲ್ಲಿ ವಿಪರೀತ ಚಳಿ ಆವರಿಸಿದೆ.

ಮುಂದೆ ಮಳೆ ಬಿರುಸುಗೊಳ್ಳುವ ನಿರೀಕ್ಷೆ:

ಒಂದು ದಿನದ ಮಟ್ಟಿಗೆ ಮಳೆ ಬಿಡುವು ನೀಡಿದ್ದರೂ, ಮಳೆ ತಗ್ಗುವ ಲಕ್ಷಣಗಳಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಭಾನುವಾರ ಇಲ್ಲವೇ ಸೋಮವಾರ ಮತ್ತೆ ಮಳೆ ಬಿರುಸಾಗಲಿದೆ ಎಂದು ಮುನ್ನಚ್ಚರಿಕೆ ನೀಡಿದೆ.

ಭಾಗಮಂಡಲದಲ್ಲಿ 3.4 ಸೆಂ.ಮೀ ಮಳೆ:

ಶನಿವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಭಾಗಮಂಡಲ ವ್ಯಾಪ್ತಿಯಲ್ಲಿ 3.4 ಸೆಂ.ಮೀ ಮಳೆಯಾಗಿದೆ. ಮಡಿಕೇರಿಯಲ್ಲಿ 3, ಸಂಪಾಜೆಯಲ್ಲಿ 2.5, ಹುದಿಕೇರಿ, ನಾಪೋಕ್ಲು ಹಾಗೂ ಶಾಂತಳ್ಳಿ ಭಾಗದಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.