ADVERTISEMENT

ದಸರೆಯಲ್ಲಿ ಮಕ್ಕಳ ಸಂತೆ, ಮಕ್ಕಳ ಮಂಟಪ!

ರೋಟರಿ ಮಿಸ್ಟಿ ಹಿಲ್ಸ್‌ನಿಂದ ಅ.3ರ ಮಕ್ಕಳ ದಸರೆಯಲ್ಲಿ ವೈವಿಧ್ಯಮಯ ಸ್ಪರ್ಧೆಗಳು

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2022, 17:08 IST
Last Updated 18 ಸೆಪ್ಟೆಂಬರ್ 2022, 17:08 IST

ಮಡಿಕೇರಿ: ಮಡಿಕೇರಿ ದಸರೆಯಲ್ಲಿ ಈ ಬಾರಿ ಮಕ್ಕಳ ಸಂತೆ, ಮಕ್ಕಳ ಮಂಟಪಗಳು ಆಯೋಜನೆ ಗೊಳ್ಳಲಿವೆ. ಅ. 3ರಂದು ಗಾಂಧಿ ಮೈದಾನದಲ್ಲಿ ಸಂಪೂರ್ಣ ಚಿಣ್ಣರ ಚಿಲಿಪಿಲಿಯಾಗಿ ದಸರೆ ಮಾರ್ಪಾಡಾಗಲಿದೆ.

ರೋಟರಿ ಮಿಸ್ಟಿ ಹಿಲ್ಸ್ ಈ ಬಾರಿ ಅಂದು ಬೆಳಿಗ್ಗೆ 9.30ರಿಂದಲೇ ಮಕ್ಕಳಿಗಾಗಿ ವೈವಿಧ್ಯಮಯ ಸ್ಪರ್ಧೆಗಳನ್ನು ಆಯೋಜಿಸಿದೆ. ಮಕ್ಕಳ ಸಂತೆ, ಮಕ್ಕಳ ಮಂಟಪಗಳ ಜತೆಗೆ ಕ್ಲೇ ಮಾಡೆಲಿಂಗ್, ಛದ್ಮವೇಷ ಸ್ಪರ್ಧೆಗಳೂ ನಡೆಯಲಿವೆ.

‘ಮಕ್ಕಳ ಸಂತೆ’ಯು ವಿದ್ಯಾರ್ಥಿಗಳಿಗಾಗಿ 2 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಅಗತ್ಯವಿರುವ ಪರಿಕರಗಳನ್ನು ವಿದ್ಯಾರ್ಥಿಗಳೇ ತರಬೇಕು. ತಂಡದಲ್ಲಿ ಗರಿಷ್ಠ 4 ಮಕ್ಕಳಿಗೆ ಮಾತ್ರ ಅವಕಾಶ ಇದೆ. ‘ಮಕ್ಕಳಿಂದ ಅಂಗಡಿ’ ಸ್ಪರ್ಧೆಯಲ್ಲಿ ಒಂದು ತಂಡದಲ್ಲಿ 4 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಇದೆ. ‘ಮಕ್ಕಳ ಮಂಟಪ’ ತಂಡದಲ್ಲಿ ಗರಿಷ್ಠ 5 ವಿದ್ಯಾರ್ಥಿಗಳಿಗೆ ಅವಕಾಶ ಇದೆ.

ADVERTISEMENT

ಛದ್ಮವೇಷ ಸ್ಪರ್ಧೆಯು ಎಲ್‌ಕೆಜಿಯಿಂದ 1ನೇ ತರಗತಿಯವರೆಗಿನ ವಿಭಾಗ, 2ನೇ ತರಗತಿಯಿಂದ 4ನೇ ತರಗತಿಯವರೆಗಿನ ವಿಭಾಗ, 5ನೇ ತರಗತಿಯಿಂದ 7ನೇ ತರಗತಿ ವಿಭಾಗದಲ್ಲಿ ನಡೆಯಲಿದೆ.

‘ಕ್ಲೇ ಮಾಡೆಲಿಂಗ್ ಸ್ಪರ್ಧೆ’ಯು 6 ಮತ್ತು 7ನೇ ತರಗತಿ, 8ರಿಂದ 10ನೇ ತರಗತಿ ವಿಭಾಗದ ವಿದ್ಯಾರ್ಥಿಗಳಿಗೆ ಸ್ಪರ್ಧೆಗಳು ನಡೆಯಲಿವೆ. ಸ್ಥಳದಲ್ಲೇ ಕ್ಲೇ ಮಾಡೆಲಿಂಗ್ ತಯಾರಿಸಬೇಕಿದೆ.

ಮಕ್ಕಳ ದಸರಾವನ್ನು 8 ವರ್ಷಗಳ ಹಿಂದೆ ಮಡಿಕೇರಿ ದಸರಾದಲ್ಲಿ ಪರಿಚಯಿಸಿದ್ದ ದಸರಾ ಸಾಂಸ್ಕೖತಿಕ ಸಮಿತಿ ಮಾಜಿ ಅಧ್ಯಕ್ಷ ಎಚ್.ಟಿ.ಅನಿಲ್ ಅವರೇ ಸತತ 9ನೇ ವರ್ಷವೂ ಮಕ್ಕಳ ದಸರಾದ ಸಂಚಾಲಕರಾಗಿ ಆಯ್ಕೆಯಾಗಿದ್ದಾರೆ. ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಸಾದ್‌ಗೌಡ, ಕಾರ್ಯದರ್ಶಿ ಪ್ರಮೋದ್ ಕುಮಾರ್ ರೈ ನೇತೖತ್ವ ವಹಿಸಿದ್ದಾರೆ.

ಹೆಸರು ನೋಂದಾಯಿಸಲು ಸೆ. 26 ಕೊನೇ ದಿನ. ‘ಮಕ್ಕಳ ಸಂತೆ’ಗೆ ಶಫಾಲಿ ರೈ ಮೊ: 97415 23484, ‘ಮಕ್ಕಳ ಅಂಗಡಿ’ಗೆ ಪಲ್ಲವಿ ಪ್ರಸಾದ್ ಮೊ:9972 963151, ‘ಮಕ್ಕಳ ಮಂಟಪ’ಕ್ಕೆ ಶಮ್ಮಿ ಪ್ರಭು ಮೊ: 94498 33179, ‘ಛದ್ಮವೇಷ’ಕ್ಕೆ ಗಾನಾ ಪ್ರಶಾಂತ್ ಮೊ: 94487 13743, ‘ಕ್ಲೇ ಮಾಡೆಲಿಂಗ್’ಗೆ ರಾಧಿಕಾ ವಿಶ್ವ ಮೊ: 97417 89271ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.