ADVERTISEMENT

ದೊಡ್ಡಳಿಲು ಬೇಟೆ: ಬಂಧನ

​ಪ್ರಜಾವಾಣಿ ವಾರ್ತೆ
Published 1 ಮೇ 2021, 7:27 IST
Last Updated 1 ಮೇ 2021, 7:27 IST
ವಿರಾಜಪೇಟೆ ಸಮೀಪದ ಪಾಲಂಗಾಲ ವ್ಯಾಪ್ತಿಯ ಅರಣ್ಯದಲ್ಲಿ ಹಾರುವ ದೊಡ್ಡಳಿಲನ್ನು ಬೇಟೆಯಾಡಿದ ಆರೋಪಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿದರು
ವಿರಾಜಪೇಟೆ ಸಮೀಪದ ಪಾಲಂಗಾಲ ವ್ಯಾಪ್ತಿಯ ಅರಣ್ಯದಲ್ಲಿ ಹಾರುವ ದೊಡ್ಡಳಿಲನ್ನು ಬೇಟೆಯಾಡಿದ ಆರೋಪಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿದರು   

ವಿರಾಜಪೇಟೆ: ಸಮೀಪದ ಪಾಲಂಗಾಲ ಗ್ರಾಮ ವ್ಯಾಪ್ತಿಯ ಅರಣ್ಯದಲ್ಲಿ ಹಾರುವ ದೊಡ್ಡಳಿಲನ್ನು ಬೇಟೆಯಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬರನ್ನು ಅರಣ್ಯಾಧಿಕಾರಿಗಳು ಗುರುವಾರ ಬಂಧಿಸಿದ್ದಾರೆ.

ಪಾಲಂಗಾಲ ಗ್ರಾಮದ ಲೈನ್‌ಮನೆಯಲ್ಲಿ ವಾಸವಿರುವ ಸುನೀಲ್ ಬಂಧಿತ ಆರೋಪಿ.

ಅರಣ್ಯ ಇಲಾಖೆ ಅಧಿಕಾರಿಗಳು ಆರೋಪಿ ಮನೆ ಮೇಲೆ ದಾಳಿ ನಡೆಸಿದಾಗ ಪತ್ತೆಯಾದ ದೊಡ್ಡಳಿನ ಮಾಂಸ, ಕತ್ತಿ ಹಾಗೂ ಬೇಟೆಗೆ ಬಳಸಿದ ಕೋವಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ತಲೆಮರೆಸಿಕೊಂಡಿರುವ ಮುದ್ದು ಸೋಮಯ್ಯ ಹಾಗೂ ಕೆ.ಮೇದಪ್ಪ
ಎಂಬುವವರ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

ADVERTISEMENT

ವಿರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾ
ಧಿಕಾರಿ ವೈ.ಚಕ್ರಪಾಣಿ, ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಜೆ.ರೋಷಿಣಿ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಕೆ.ಎಂ.ದೇವಯ್ಯ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಆನಂದ, ಮೋನಿಷಾ, ಶ್ರೀಶೈಲ, ಸಚಿನ್, ಸಂಜಿತ್, ಅರಣ್ಯ ರಕ್ಷಕರಾದ ಮಾಲತೇಶ ಬಡಿಗೇರ, ಸೋಮಯ್ಯ, ನಾಗರಾಜ, ಹುಸೇನ್, ಚಂದ್ರಶೇಖರ್, ಕ್ಯಾಂಪ್ ಸಿಬ್ಬಂದಿಗಳಾದ ಪೊನ್ನಪ್ಪ, ಸಚಿನ್‌, ಪ್ರಕಾಶ, ಮೊಣ್ಣಪ್ಪ ಹಾಗೂ ಅಶೋಕ್
ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.