ADVERTISEMENT

ಮತ್ತೆ ಕಂಪಿಸಿದ ಭೂಮಿ?

​ಪ್ರಜಾವಾಣಿ ವಾರ್ತೆ
Published 2 ಜುಲೈ 2022, 4:14 IST
Last Updated 2 ಜುಲೈ 2022, 4:14 IST
   

ಮಡಿಕೇರಿ: ಕೊಡಗು ಜಿಲ್ಲೆಯ‌ ಚೆಂಬು, ಕಲ್ಲುಗುಂಡಿ, ಸಂಪಾಜೆ ಭಾಗಗಳಲ್ಲಿ ಶನಿವಾರ ನಸುಕಿನ 3 ಗಂಟೆ ಸುಮಾರಿನಲ್ಲಿ ಭೂಮಿ ಕಂಪಿಸಿದೆ ಎನ್ನುವ ಸುದ್ದಿ ವಾಟ್ಸ್ಆ್ಯಪ್ ನಲ್ಲಿ ಹರಿದಾಡುತ್ತಿದೆ. ಜತೆಗೆ, ಚೆಂಬು ಗ್ರಾಮದ ಪೂಜಾರಿಗದ್ದೆ ಗಿರಿಧರ ಅವರ ಮನೆಯ ಮೇಲೆ ಮಣ್ಣು ಕುಸಿದಿದೆ ಎಂಬ ಸುದ್ದಿಯೂ ಹರಡಿದೆ.
ಈ ಕುರಿತು ಪ್ರಜಾವಾಣಿ ಗೆ ಪ್ರತಿಕ್ರಿಯಿಸಿದ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ ಪರಿಣತ ಅನನ್ಯ ವಾಸುದೇವ್, 'ಮತ್ತೆ

ಭೂಕಂಪವಾಗಿರುವ ಕುರಿತ ದೂರುಗಳು ಬಂದಿಲ್ಲ. ಜೆಸಿಬಿ ಮೂಲಕ ಅಗೆದು ಹಾಕಲಾಗಿದ್ದ ಮಣ್ಣಿನ ಸ್ವಲ್ಪ ಭಾಗ ಮಾತ್ರ ಧಾರಾಕಾರ ಮಳೆಗೆ ಗಿರಿಧರ್ ಅವರ ಮನೆಯ ಮೇಲೆ ಬಿದ್ದಿದೆ. ಮಳೆಯಿಂದ, ಭೂಕಂಪದಿಂದ ಯಾವುದೇ ಹಾನಿ ಸಂಭವಿಸಿಲ್ಲ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT