ADVERTISEMENT

ಮಿಕ್ಸ್ ಬಾಕ್ಸಿಂಗ್ ಸ್ಪರ್ಧೆಗೆ ಸೋಮವಾರಪೇಟೆಯ ಬಾಲಕ ಆಯ್ಕೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 5:31 IST
Last Updated 11 ಜನವರಿ 2026, 5:31 IST
ಕೌಶಿಕ್ ಕುಮಾರ್
ಕೌಶಿಕ್ ಕುಮಾರ್   

ಸೋಮವಾರಪೇಟೆ: ಸಮೀಪದ ಐಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಯು.ಸಿ. ಕೌಶಿಕ್ ಕುಮಾರ್, ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಮಿಕ್ಸ್ ಬಾಕ್ಸಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದು, ಭಾರತ ತಂಡವನ್ನು ಪ್ರತಿನಿಧಿಸಲಿದ್ದಾನೆ.

ಇತ್ತೀಚೆಗೆ ನೇಪಾಳದ ಕಠ್ಮಂಡುವಿನಲ್ಲಿ ನಡೆದ ಏಷಿಯನ್ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಪಡೆದ ಕೌಶಿಕ್‌, ಅಂತರರಾಷ್ಟ್ರೀಯ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಗಿಟ್ಟಿಸಿದ್ದಾನೆ.

ಕೌಶಿಕ್‌ ಗರಗಂದೂರು ಗ್ರಾಮದ ಯಂಕನ ಚಂಗಪ್ಪ ಹಾಗೂ ಆಶಾ ದಂಪತಿ ಪುತ್ರ. ಈ ಬಾಲಕನಿಗೆ ಮಾದಾಪುರದ ಜಂಬೂರು ನಿವಾಸಿ, ಮಿಕ್ಸ್ ಬಾಕ್ಸಿಂಗ್ ಅಸೋಸಿಯೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸುದರ್ಶನ್ ತರಬೇತಿ ನೀಡಿದ್ದಾರೆ.

ADVERTISEMENT