ADVERTISEMENT

ವೈಕೋ ಉರುಸ್‌ನಲ್ಲಿ ಶಾಸಕ ಪೊನ್ನಣ್ಣ ಭಾಗಿ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2025, 12:39 IST
Last Updated 14 ಏಪ್ರಿಲ್ 2025, 12:39 IST
ನಾಪೋಕ್ಲು ಹೋಬಳಿಯ ಕಕ್ಕಬ್ಬೆಯಲ್ಲಿ ನಡೆದ ವೈಕೋ ಉರುಸ್ ಸಮಾರಂಭದ  ಕಾರ್ಯಕ್ರಮದಲ್ಲಿ  ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಸನ್ಮಾನಿಸಲಾಯಿತು
ನಾಪೋಕ್ಲು ಹೋಬಳಿಯ ಕಕ್ಕಬ್ಬೆಯಲ್ಲಿ ನಡೆದ ವೈಕೋ ಉರುಸ್ ಸಮಾರಂಭದ  ಕಾರ್ಯಕ್ರಮದಲ್ಲಿ  ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಸನ್ಮಾನಿಸಲಾಯಿತು   

ನಾಪೋಕ್ಲು: ‘ಉರುಸ್ ಧಾರ್ಮಿಕ ಹಾಗೂ ಪಾರಂಪರಿಕವಾಗಿ ಆಚರಿಸಿಕೊಂಡು ಬಂದಿರುವ ಆಚರಣೆಯಾಗಿದ್ದು, ಈ ಭಾಗದಲ್ಲಿ ಅತ್ಯಂತ ಶ್ರದ್ಧಾಭಕ್ತಿಯಿಂದ ನಡೆಯುತ್ತಾ ಬಂದಿದೆ. ಇಂದು ಈ ಸಮಾರಂಭದಲ್ಲಿ ಭಾಗವಹಿಸುವ ಅವಕಾಶ ದೊರಕಿದ್ದು ಅತೀವ ಸಂತಸವನ್ನು ಉಂಟು ಮಾಡಿದೆ’ ಎಂದು ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಹೇಳಿದರು.

ಮಡಿಕೇರಿ ತಾಲ್ಲೂಕು ನಾಪೋಕ್ಲು ಹೋಬಳಿಯ ಕಕ್ಕಬ್ಬೆಯಲ್ಲಿ ನಡೆದ ವೈಕೋ ಉರುಸ್ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಉರುಸ್ ಆಚರಣೆಯ ಸದುದ್ದೇಶದ ಸಂದೇಶ ನಾಡಿನ ಎಲ್ಲೆಡೆ ಪಸರಿಸುವಂತಾಗಲಿ ಎಂದು ಶಾಸಕರು ಶುಭ ಹಾರೈಸಿದರು.

ADVERTISEMENT

ಕಾಂಗ್ರೆಸ್ ಪ್ರಮುಖರಾದ ಸಂಪನ್ ಅಯ್ಯಪ್ಪ, ಬಾಚಮಂಡ ಲವ ಚಿಣ್ಣಪ್ಪ, ಅಹಮದ್ ಹಾಜಿ, ವಿ.ಎ.ಉಸ್ಮಾನ್, ವಿ.ಎಂ.ಉಸ್ಮಾನ್, ಮೊಯಿದು ಉಪಸ್ಥಿತರಿದ್ದರು.

ನಾಪೋಕ್ಲು ಸಮೀಪದ ಕಕ್ಕಬೆ ಗ್ರಾಮದಲ್ಲಿ ನಡೆದ ವೈಕೋ ಉರುಸ್ ಸಮಾರಂಭದ  ಕಾರ್ಯಕ್ರಮದಲ್ಲಿ  ಶಾಸಕ ಎ.ಎಸ್.ಪೊನ್ನಣ್ಣ  ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.