ADVERTISEMENT

ಸುಂಟಿಕೊಪ್ಪ ಪ್ರೆಂಡ್ಸ್ ಎಫ್.ಸಿ ಫುಟ್‌ಬಾಲ್‌ ಬಾಲ್ ಟೂರ್ನಿ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2022, 6:25 IST
Last Updated 6 ನವೆಂಬರ್ 2022, 6:25 IST
ಸುಂಟಿಕೊಪ್ಪ ಪ್ರೆಂಡ್ಸ್ ಎಫ್.ಸಿ ವತಿಯಿಂದ ನಡೆಯುತ್ತಿರುವ ಹೊನಲು ಬೆಳಕಿನ ಫುಟ್‌ಬಾಲ್‌ ಟೂರ್ನಿಯಲ್ಲಿ ಕೊಡಗರಹಳ್ಳಿ ಮತ್ತು ಮೈಸೂರು ತಂಡಗಳ ಹಣಾಹಣಿ
ಸುಂಟಿಕೊಪ್ಪ ಪ್ರೆಂಡ್ಸ್ ಎಫ್.ಸಿ ವತಿಯಿಂದ ನಡೆಯುತ್ತಿರುವ ಹೊನಲು ಬೆಳಕಿನ ಫುಟ್‌ಬಾಲ್‌ ಟೂರ್ನಿಯಲ್ಲಿ ಕೊಡಗರಹಳ್ಳಿ ಮತ್ತು ಮೈಸೂರು ತಂಡಗಳ ಹಣಾಹಣಿ   

ಸುಂಟಿಕೊಪ್ಪ: ಇಲ್ಲಿನ‌ ಫ್ರೆಂಡ್ಸ್ ಫುಟ್‌ಬಾಲ್ ಕ್ಲಬ್ ವತಿಯಿಂದ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಎಸ್.ಎಂ.ಎಸ್.ಎಂ ಸ್ಮಾರಕ ಹೊನಲು ಬೆಳಕಿನ‌ ರಾಷ್ಟ್ರಮಟ್ಟದ 5 ಆಟಗಾರರ ಫುಟ್‌ಬಾಲ್‌ ಟೂರ್ನಿಯ 2ನೇ ದಿನದ ಪಂದ್ಯದಲ್ಲಿ ವಿಜಯನಗರ ಮೈಸೂರು ಮತ್ತು ಅಮಿಟಿ ಗದ್ದೆಹಳ್ಳ ತಂಡಗಳು ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆದವು.

ಇಲ್ಲಿನ ಜಿಯಂಪಿ ಶಾಲಾ ಮೈದಾನದಲ್ಲಿ ಶನಿವಾರ ನಡೆದ ಮೊದಲ ಪಂದ್ಯವನ್ನು ಕೊಡಗಿನ ಹಿರಿಯ ಫುಟ್‌ಬಾಲ್‌ ಆಟಗಾರ ಅಣ್ಣಪ್ಪ ಉದ್ಘಾಟಿಸಿದರು.

ಮೊದಲ ಪಂದ್ಯವು ಎನ್.ವೈ.ಸಿ ಕೊಡಗರಹಳ್ಳಿ ಮತ್ತು ವೈಲ್‌ಕ್ಯಾಟ್ ಮೂರ್ನಾಡು ತಂಡಗಳ ನಡುವೆ ರೋಚಕ ಪಂದ್ಯ ನಡೆಯಿತು.

ADVERTISEMENT

ಪಂದ್ಯದ ಮೊದಲಾರ್ಧದಲ್ಲಿ 2 ತಂಡಗಳಿಗೂ ಬಹಳಷ್ಟು ಅವಕಾಶ ಗಳಿದ್ದರೂ ಗೋಲು ಗಳಿಸುವುದನ್ನು ಗೋಲು ಕೀಪರ್ ತಡೆದರು. ಹಂತ ಹಂತವಾಗಿ ರೋಚಕತೆಯಿಂದ ಕೂಡಿದ್ದ ಪಂದ್ಯದ ದ್ವಿತೀಯಾರ್ಧದಲ್ಲಿ ಕೊಡಗರಹಳ್ಳಿ ತಂಡದ ಮುನ್ನಡೆ ಆಟಗಾರ ಹರೀಶ್ ಒಂದು ಗೋಲು ಹೊಡೆಯುವ ಮೂಲಕ ತಂಡಕ್ಕೆ ಜಯ ತಂದುಕೊಟ್ಟರು.

ಎರಡನೇ ಪಂದ್ಯವು ಕಿಪ್ತ ಮೂರ್ನಾಡು ಮತ್ತು ಅಮಿಟಿ ಗದ್ದೆಹಳ್ಳ ‘ಎ’ ತಂಡಗಳ ನಡುವೆ ನಡೆಯಿತು. ಈ ಪಂದ್ಯವು ಆರಂಭದಿಂದಲೂ ಚೆಂಡು ಅಮಿಟಿ ತಂಡ ಹತೋಟಿಯಲ್ಲಿದ್ದು, ಮೊದಲಾರ್ಧದ 5ನೇ ನಿಮಿಷದಲ್ಲಿ ಸಾದಿಕ್ ಗೋಲು ಹೊಡೆದು ತಂಡಕ್ಕೆ ಮುನ್ನಡೆ ತಂದರು. ಆದರೆ, ದ್ವಿತೀಯಾರ್ಧದಲ್ಲಿ ಮೂರ್ನಾಡು ತಂಡ ಆಟಗಾರರು ಆಕ್ರಮಣಕಾರಿ ಆಟಕ್ಕಿಳಿದು 4ನೇ ನಿಮಿಷದಲ್ಲಿ ತಮ್ಜಿ ಒಂದು ಗೋಲು ಹೊಡೆದು ಸಮಬಲ ಸಾಧಿಸಿದರು. ಆದರೆ, ಅಮಿಟಿ ತಂಡದ ಮುನ್ನಡೆ ಆಟಗಾರ ಕುಟ್ಟಿ ಕೊನೆಯ ಕ್ಷಣದಲ್ಲಿ 2 ಗೋಲು ಹೊಡೆದು ಗದ್ದೆಹಳ್ಳ ತಂಡ ಜಯತಂದು ಸೆಮಿಫೈನಲ್‌ಗೆ ಹಂತಕ್ಕೆ ಕೊಂಡೊಯ್ದರು.

ಮೂರನೇ ಪಂದ್ಯದಲ್ಲಿ ಎನ್.ವೈ.ಸಿ ಕೊಡಗರಹಳ್ಳಿ ಮತ್ತು ವಿಜಯನಗರ ಮೈಸೂರು ತಂಡದ ನಡುವೆ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೈಸೂರು ತಂಡದ ಆಟಗಾರ ಕಾರ್ಯಪ್ಪ ಗೋಲು ಹೊಡೆದು ತಂಡಕ್ಕೆ ಜಯ ತಂದುಕೊಟ್ಟು ಸೆಮಿಫೈನಲ್ ಹಂತಕ್ಕೆ ಪ್ರವೇಶಿಸುವಂತೆ ಮಾಡಿದರು.

ನಂತರ, ನಡೆದ ಸಾಕರ್ ಸಿಟಿ ಸುಂಟಿಕೊಪ್ಪ ಮತ್ತು ಸಿಸಿಬಿ ಪಾಲಿಬೆಟ್ಟ ತಂಡಗಳ‌ ನಡುವೆ ನಡೆದ ಪಂದ್ಯವು ಕ್ರೀಡಾಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿತು. ಎರಡು ತಂಡಕ್ಕೂ ಗೋಲು ಗಳಿಸುವ ಹಲವು ಅವಕಾಶಗಳನ್ನು 2 ತಂಡದ ಗೋಲು ಕೀಪರ್ ವಿಫಲಗೊಳಿಸಿದರು.

ಎರಡು ತಂಡಗಳು ಗೋಲು ಗಳಿಸಲು ಸಾಧ್ಯವಾಗದ್ದರಿಂದ ಟೈ ಬ್ರೇಕರ್ ನೀಡಲಾಯಿತು. ಇದರಲ್ಲಿ ಸಾಕರ್ ಸಿಟಿ ಸುಂಟಿಕೊಪ್ಪ ತಂಡವು 3-1 ಗೋಲುಗಳಿಂದ ಜಯ ಗಳಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.

ಮತ್ತೊಂದು ಪಂದ್ಯವು ಸೈಫಲ್‌ ಎಫ್.ಸಿ ಪಾಲಿಬೆಟ್ಟ ‘ಎ’ ಮತ್ತು ಆರ್.ಎ..ಎಫ್.ಸಿ ಬೆಂಗಳೂರು ತಂಡಗಳ ನಡುವೆ ನಡೆಯಿತು. ಈ ಪಂದ್ಯದ ಪೂರ್ಣಾವಧಿಯವರೆಗೂ ಗೋಲು ಬಾರದ್ದರಿಂದ ಟೈ ಬ್ರೇಕರ್ ನೀಡಲಾಯಿತು. ಇದರಲ್ಲಿ ಬೆಂಗಳೂರು ತಂಡವು 3-2 ಗೋಲುಗಳಿಂದ ಜಯಗಳಿಸಿ ಮುನ್ನಡೆಯಿತು.

ಬಿ.ವೈ.ಸಿ ಬ್ಯಾಡಗುಟ್ಟ ಮತ್ತು ಅಮಿಟಿ ಗದ್ದೆಹಳ್ಳ ‘ಬಿ’ ತಂಡಗಳ ನಡುವೆ ನಡೆದು ಬ್ಯಾಡಗುಟ್ಟ ತಂಡದ ಶಬರಿ ಅವರು ಒಂದು ಗೋಲು ಹೊಡೆದು ತಂಡಕ್ಕೆ ಜಯ ತಂದುಕೊಟ್ಟರು.

ಮತ್ತೊಂದು ಪಂದ್ಯವು ಸೈಫಲ್ ಎಫ್.ಸಿ ಎ ಮತ್ತು ಮಾಸ್ಟರ್ ಎಫ್.ಸಿ ಸುಂಟಿಕೊಪ್ಪ ತಂಡಗಳ ನಡುವೆ ನಡೆದು ಪಾಲಿಬೆಟ್ಟ ತಂಡದ ಪಾಂಡಿಯನ್ 2 ಮತ್ತು ರಂಗನಾಥ್ ಒಂದು ಗೋಲು ಹೊಡೆಯುವ ಮೂಲಕ ತಂಡಕ್ಕೆ ಜಯ ತಂದುಕೊಟ್ಟರು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.