
ಪ್ರಜಾವಾಣಿ ವಾರ್ತೆ
ನಾಪೋಕ್ಲು: ಇಲ್ಲಿನ ನಾಡು ಭಗವತಿ ದೇವಾಲಯದ ವಾರ್ಷಿಕ ಉತ್ಸವ ಮಾರ್ಚ್ 17ರಿಂದ 21 ರವರೆಗೆ ನಡೆಯಲಿದೆ.
ಉತ್ಸವದ ಅಂಗವಾಗಿ ಮಾರ್ಚ್ 18ರಂದು ದೇವರ ಊರ ಬಲಿ, ಮಾರ್ಚ್ 19ರಂದು ಪಟ್ಟಣಿ ಹಬ್ಬ, ಮಾರ್ಚ್ 20ರಂದು ಕಾವೇರಿ ನದಿಯಲ್ಲಿ ದೇವರ ಸ್ನಾನ, ಮಾರ್ಚ್ 21ರಂದು ಅಜ್ಜಪ್ಪ, ವಿಷ್ಣುಮೂರ್ತಿ ಕೋಲ ಜರುಗಲಿದೆ.
ಉತ್ಸವದಲ್ಲಿ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ದೇವಾಲಯದ ತಕ್ಕ ಮುಖ್ಯಸ್ಥರು ಹಾಗೂ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.