ADVERTISEMENT

ವಿಶ್ವನಾಥ್ ಸಲಹೆಯಲ್ಲಿ ಸತ್ಯಾಂಶವಿದ್ದರೆ ಸ್ವೀಕಾರ: ಸಚಿವ ಸಾ.ರಾ. ಮಹೇಶ್‌

​ಪ್ರಜಾವಾಣಿ ವಾರ್ತೆ
Published 1 ಜೂನ್ 2019, 14:18 IST
Last Updated 1 ಜೂನ್ 2019, 14:18 IST
ಸಾ.ರಾ. ಮಹೇಶ್‌
ಸಾ.ರಾ. ಮಹೇಶ್‌   

ಮಡಿಕೇರಿ: ‘ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಅಡಗೂರು ಎಚ್‌. ವಿಶ್ವನಾಥ್‌ ಅವರು ನಮ್ಮ ಮಾರ್ಗದರ್ಶಕರು. ಅವರ ಸಲಹೆ ಹಾಗೂ ಸೂಚನೆಗಳಲ್ಲಿ ಸತ್ಯಾಂಶವಿದ್ದರೆ ಸ್ವೀಕರಿಸುತ್ತೇನೆ’ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್‌ ಅವರು ಶನಿವಾರ ಇಲ್ಲಿ ತಿರುಗೇಟು ನೀಡಿದರು.

ಸೋಮವಾರಪೇಟೆ ತಾಲ್ಲೂಕಿನ ಜಂಬೂರಿನಲ್ಲಿ ಸಂತ್ರಸ್ತರ ಮನೆ ವೀಕ್ಷಿಸಿದ ನಂತರ ಮಾತನಾಡಿದ ಅವರು, ‘ವಿಶ್ವನಾಥ್‌ ಅವರದ್ದು 40 ವರ್ಷದ ರಾಜಕೀಯ ಅನುಭವ. ನಮಗೆ ಸಲಹೆ ನೀಡುವ ಸಂಪೂರ್ಣ ಹಕ್ಕು ಅವರಿಗಿದೆ’ ಎಂದು ಹೇಳಿದರು.

‘ಕೆ.ಆರ್‌. ನಗರದ ಪುರಸಭೆಯಲ್ಲಿ ಜೆಡಿಎಸ್‌ ಸೋಲಿನ ಸಂಪೂರ್ಣ ಹೊಣೆಯನ್ನು ನಾನೇ ಹೊರುತ್ತೇನೆ. ಮುಂದಿನ ಚುನಾವಣೆಗಳಲ್ಲಿ ಅದನ್ನು ಸರಿಪಡಿಸಿಕೊಳ್ಳುವ ಕುರಿತು ವಿಶ್ವನಾಥ್‌ ಅವರು ಸಲಹೆ ನೀಡಿದರೆ ತಿದ್ದಿಕೊಳ್ಳುತ್ತೇನೆ’ ಎಂದು ಹೇಳಿದರು.

ADVERTISEMENT

ಜೆಡಿಎಸ್ ಎಂದೂ ದ್ವೇಷದ ರಾಜಕಾರಣ ಮಾಡಿಲ್ಲ. ವಿಶ್ವನಾಥ್‌ ಅವರನ್ನೇ ರಾಜ್ಯ ಅಧ್ಯಕ್ಷರನ್ನಾಗಿ ಒಪ್ಪಿಕೊಂಡ ಮೇಲೆ ಅವರ ಸಲಹೆಗಳನ್ನೂ ಒಪ್ಪಿಕೊಳ್ಳದೇ ಇರಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಗಿರುವ ಅಂತರವನ್ನು ಸರಿಪಡಿಸಿಕೊಳ್ಳಲು ವಿಶ್ವನಾಥ್‌ ಮಾರ್ಗದರ್ಶನ ಪಡೆಯುತ್ತೇನೆ ಎಂದು ಪುರಸಭೆ ಸೋಲಿನ ವಿಚಾರದಲ್ಲಿ ವಿಶ್ವನಾಥ್‌ ಹೇಳಿಕೆಗೆ ಮಹೇಶ್‌ ತಿರುಗೇಟು ಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.