ADVERTISEMENT

ಸಂತ್ರಸ್ತರ ಸಭೆ | ಮಾಧ್ಯಮ ಪ್ರತಿನಿಧಿಗಳ ಮೇಲೆ ಸಚಿವ ಸಾ.ರಾ.ಮಹೇಶ್‌ ಸಿಡಿಮಿಡಿ

​ಪ್ರಜಾವಾಣಿ ವಾರ್ತೆ
Published 8 ಜೂನ್ 2019, 6:10 IST
Last Updated 8 ಜೂನ್ 2019, 6:10 IST
 ಸಾ.ರಾ.ಮಹೇಶ್‌
ಸಾ.ರಾ.ಮಹೇಶ್‌   

ಮಡಿಕೇರಿ: ಪ್ರಕೃತಿ ವಿಕೋಪ ಸಂತ್ರಸ್ತರ ಸಭೆಯ ವರದಿಗೆ ತೆರಳಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೆ, ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್‌ ಶುಕ್ರವಾರ ಇಲ್ಲಿ ಹರಿಹಾಯ್ದರು.

ಸಭೆಗೂ ಮುನ್ನ, ಮಾಧ್ಯಮದವರನ್ನು ಕಂಡ ಸಚಿವರು ಸಿಡಿಮಿಡಿಗೊಂಡರು. ‘ಸಭೆಯಿಂದ ಹೊರಹೋಗಿ, ನಿಮಗೆ ಕನ್ನಡ ಭಾಷೆ ಅರ್ಥ ಆಗಲ್ವಾ? ನಮಗೆ‌ ಬೇಕಾದಾಗ, ನಾವು ಕರೆದಾಗ ನೀವು ಬಂದರಷ್ಟೇ ಸಾಕು’ ಎಂದು ಹೇಳಿ ಸಭೆಯಿಂದ ಹೊರಹಾಕುವ ಪ್ರಯತ್ನ ಮಾಡಿದರು. ‘ಸಭೆಯ ವಿಡಿಯೊ ಮಾಡಬೇಡಿ' ಎಂದು‌ ಎಲೆಕ್ಟ್ರಾನಿಕ್ ಮಾಧ್ಯಮಗಳ ಕ್ಯಾಮೆರಾಮನ್‌ಗಳನ್ನೂ ಗದರಿದರು.

ಪ್ರತಿಭಟನೆ

ADVERTISEMENT

ಸಂತ್ರಸ್ತರಿಗೆ ಸರ್ಕಾರ ಇನ್ನೂ ಸೂಕ್ತ ಸೌಲಭ್ಯ ಕಲ್ಪಿಸಿಲ್ಲ ಎಂದು ಆಪಾದಿಸಿ, ಶಾಸಕರಾದ ಎಂ.ಪಿ. ಅಪ್ಪಚ್ಚುರಂಜನ್, ಕೆ.ಜಿ. ಬೋಪಯ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರು ವೇದಿಕೆಗೆ ತೆರಳದೇ, ಅದರ ಮುಂಭಾಗದಲ್ಲಿ ಆಸೀನರಾಗುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.