ADVERTISEMENT

ಗ್ರಾ.ಪಂ ಉಪ ಚುನಾವಣಾ ವೇಳಾಪಟ್ಟಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2018, 13:44 IST
Last Updated 15 ಡಿಸೆಂಬರ್ 2018, 13:44 IST

ಮಡಿಕೇರಿ: ಮಡಿಕೇರಿ ತಾಲ್ಲೂಕಿನ ಎಮ್ಮೆಮಾಡು, ಸಂಪಾಜೆ, ಮರಗೋಡು ಮತ್ತು ವಿರಾಜಪೇಟೆ ತಾಲ್ಲೂಕಿನ ಮಾಯಮುಡಿ, ಬಿಳುಗುಂದ ಹಾಗೂ ಸೋಮವಾರಪೇಟೆ ತಾಲ್ಲೂಕಿನ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿ ಪ್ರಕಟಿಸಿದೆ.

ಡಿ. 17ರಂದು ಜಿಲ್ಲಾಧಿಕಾರಿ ಅವರು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದಾರೆ. 20ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನ. 21ರಂದು ನಾಮಪತ್ರ ಪರಿಶೀಲನಾ ಕಾರ್ಯ. 24ರಂದು ನಾಮಪತ್ರ ಹಿಂ‍ಪಡೆಯಲು ಕೊನೆಯ ದಿನವಾಗಿದೆ.

ಜ. 2ರಂದು ಮತದಾನದ ಅವಶ್ಯವಿದ್ದರೆ ಬೆಳಿಗ್ಗೆ 7ರಿಂದ ಸಂಜೆ 5ರ ತನಕ ನಡೆಯಲಿದೆ. 3ರಂದು ಮರು ಮತದಾನದ ಅವಶ್ಯವಿದ್ದರೆ ನಡೆಯಲಿದೆ. ಜ. 4ರಂದು ಬೆಳಿಗ್ಗೆ 8ರಿಂದ ಆಯಾಯ ತಾಲ್ಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ. ಡಿ. 17ರಿಂದ ಆಯಾ ಗ್ರಾಮ ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೊಳ್ಳಲಿದೆ.

ADVERTISEMENT

ಮೀಸಲಾತಿ ವಿವರ: ಮಡಿಕೇರಿ ತಾಲ್ಲೂಕಿನ ಎಮ್ಮೆಮಾಡು ಗ್ರಾ.ಪಂ ಎಮ್ಮೆಮಾಡು- 1 ಪರಿಶಿಷ್ಟ ಪಂಗಡ (ಮಹಿಳೆ), ಎಮ್ಮೆಮಾಡು -2 ಪರಿಶಿಷ್ಟ ಜಾತಿ (ಮಹಿಳೆ), ಸಂಪಾಜೆ ಗ್ರಾ.ಪಂ. ಸಂಪಾಜೆ- 1 ಹಿಂದುಳಿದ ವರ್ಗ (ಅ), ಮರಗೋಡು ಗ್ರಾ.ಪಂ. ಮರಗೋಡು- 2 ಸಾಮಾನ್ಯ, ಸೋಮವಾರಪೇಟೆ ತಾಲ್ಲೂಕಿನ ನೆಲ್ಲಿಹುದಿಕೇರಿ ಗ್ರಾ.ಪಂ. ನೆಲ್ಲಿಹುದಿಕೇರಿ- 1 ಸಾಮಾನ್ಯ, ನೆಲ್ಲಿಹುದಿಕೇರಿ- 3 ಪರಿಶಿಷ್ಟ ಪಂಗಡ (ಮಹಿಳೆ), ವಿರಾಜಪೇಟೆ ತಾಲ್ಲೂಕಿನ ಮಾಯಮುಡಿ ಗ್ರಾ.ಪಂ. ಮಾಯಮು- 3 ಸಾಮಾನ್ಯ, ಬಿಳುಗುಂದ ಗ್ರಾ.ಪಂ. ಬಿಳುಗುಂದ- 1, 2 ಪರಿಶಿಷ್ಟ ಜಾತಿಗೆ ಮೀಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.