ADVERTISEMENT

‘ಅಂಕ ಗಳಿಕೆಗೆ ಶಿಕ್ಷಣ ಸೀಮಿತವಾಗಬಾರದು’

​ಪ್ರಜಾವಾಣಿ ವಾರ್ತೆ
Published 5 ಜನವರಿ 2019, 13:54 IST
Last Updated 5 ಜನವರಿ 2019, 13:54 IST
ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ಶನಿವಾರ ನಡೆದ ಉಪನ್ಯಾಸದಲ್ಲಿ ಅಭಿಮನ್ಯು ಅಕಾಡೆಮಿ ಮುಖ್ಯಸ್ಥ ಅರ್ಜುನ್ ದೇವಯ್ಯ ಮಾತನಾಡಿದರು
ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ಶನಿವಾರ ನಡೆದ ಉಪನ್ಯಾಸದಲ್ಲಿ ಅಭಿಮನ್ಯು ಅಕಾಡೆಮಿ ಮುಖ್ಯಸ್ಥ ಅರ್ಜುನ್ ದೇವಯ್ಯ ಮಾತನಾಡಿದರು   

ಮಡಿಕೇರಿ: ‘ಅಂಕಗಳಿಗೆ ಶಿಕ್ಷಣ ಸೀಮಿತವಾಗಿರಬಾರದು; ಜೀವನದ ಪಾಠವನ್ನೂ ಅದು ಕಲಿಸುವಂತಾಗಬೇಕು’ ಎಂದು ಅಭಿಮನ್ಯು ಅಕಾಡೆಮಿ ಮುಖ್ಯಸ್ಥ ಅರ್ಜುನ್ ದೇವಯ್ಯ ಅಭಿಪ್ರಾಯಪಟ್ಟರು.

ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಶನಿವಾರ ಆಯೋಜಿಸಿದ್ದ ಉಪನ್ಯಾಸದಲ್ಲಿ ಅವರು ಮಾತನಾಡಿದರು.

‘ಇಂದು ಸ್ಪರ್ಧಾತ್ಮಕ ಯುಗ. ಆದರೆ, ಆಧುನೀಕರಣದಿಂದ ಇಂದಿನ ಶಿಕ್ಷಣದ ವ್ಯವಸ್ಥೆಯಲ್ಲಿ ಬೋಧನಾ ಕ್ರಮಗಳು ಬದಲಾಗಿವೆ. ಅಂಕಗಳಿಗೆ ಶಿಕ್ಷಣ ಸೀಮಿತವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಶೈಕ್ಷಣಿಕ ಕ್ಷೇತ್ರ ವಿದ್ಯಾರ್ಥಿಗಳಿಗೆ ಜೀವನದ ಪಾಠವನ್ನು ಬೋಧಿಸುವ ಕಾರ್ಯವನ್ನು ಕೂಡ ಮಾಡಬೇಕಾಗಿದೆ’ ಎಂದು ಅರ್ಜುನ್ ತಿಳಿಸಿದರು.

ADVERTISEMENT

‘ವಿದ್ಯಾರ್ಥಿಗಳು ಸಾಧನೆ ಮನೋಭಾವ ಹೆಚ್ಚಿಸಿಕೊಳ್ಳಬೇಕೇ ಹೊರತು ತಮ್ಮಲ್ಲಿರುವ ಮನೋಸ್ಥಿತಿಯನ್ನು ಕುಗ್ಗಲು ಬಿಡಬಾರದು. ನಿರಂತರ ಪ್ರಯತ್ನ ಮತ್ತು ಪರಿಶ್ರಮದ ಮೂಲಕ ತಮ್ಮ ಗುರಿಯನ್ನು ತಲುಪಬೇಕು. ಪರಿಶ್ರಮವಿಲ್ಲದ ಯಾವ ಕಾರ್ಯಗಳೂ ಹೆಚ್ಚು ಕಾಲ ಉಳಿಯಲು ಸಾಧ್ಯವಿಲ್ಲ. ಮಾಡುವ ಪ್ರತಿ ಕಾರ್ಯದಲ್ಲಿ ಸಾರ್ಥಕತೆ ಕಂಡುಕೊಂಡಾಗ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯ’ ಎಂದು ನುಡಿದರು.

ಕೊಡವ ಸಮಾಜದ ಉಪಾಧ್ಯಕ್ಷ ಮಣವಟ್ಟೀರ ಚಿಣ್ಣಪ್ಪ, ಕಾರ್ಯದರ್ಶಿ ಅರೆಯಡ ರಮೇಶ್, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜ್ಜಿರ ಅಯ್ಯಪ್ಪ, ವಿದ್ಯಾಸಂಸ್ಥೆಯ ವಕ್ತಾರ ಕಾಳಪ್ಪ, ಪ್ರಾಂಶುಪಾಲರಾದ ಕಲ್ಮಾಡಂಡ ಸರಸ್ವತಿ ಹಾಗೂ ಆಡಳಿತಾಧಿಕಾರಿ ಪೊನ್ನಮ್ಮ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.