ADVERTISEMENT

ನಾಗರಹೊಳೆ ವನಪಾಲಕ ಸಾವು: ಸಫಾರಿ ತಾತ್ಕಾಲಿಕ ಬಂದ್

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2020, 13:23 IST
Last Updated 26 ಡಿಸೆಂಬರ್ 2020, 13:23 IST
ನಾಗರಹೊಳೆ ಪ್ರವೇಶ ದ್ವಾರ
ನಾಗರಹೊಳೆ ಪ್ರವೇಶ ದ್ವಾರ   

ಗೋಣಿಕೊಪ್ಪಲು : ಅರಣ್ಯ ರಕ್ಷಣೆಗಾಗಿ ಗಸ್ತು ತಿರುಗುತ್ತಿದ್ದ ವೇಳೆ ವನಪಾಲಕ ಗುರುರಾಜ್ ಕಾಡಾನೆ ದಾಳಿಗೆ ಈಚಿಗೆ ಬಲಿಯಾದ ಹಿನ್ನೆಲೆಯಲ್ಲಿ ನಾಗರಹೊಳೆ ಸಫಾರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.

ಅರಣ್ಯ ವೀಕ್ಷಕರು ಮೃತ ಗುರುರಾಜ್ ಪರವಾಗಿ ಪ್ರತಿಭಟನೆ ಮೌನಾಚರಣೆ ನಡೆಸುತ್ತಿರುವುದರಿಂದ ನಾಗರಹೊಳೆ ಕೇಂದ್ರ ಸ್ಥಾನದಲ್ಲಿ ಮೌನ ಆವರಿಸಿದೆ. ಮೃತ ಗುರುರಾಜ್ ಜತೆಗೆಗಿನ ಸಿಬ್ಬಂದಿಗಳು ಗೆಳೆಯನ ಅಗಲಿಕೆಯಿಂದ ನೋವಿನಲ್ಲಿ ಮುಳುಗಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರವಾಸಿಗರನ್ನು ಸಫಾರಿಗೆ ಕರೆದುಕೊಂಡು ಹೂಗುವುದು ಸೂಕ್ತವಾದುದಲ್ಲ ಎಂದು ಸಿಬ್ಬಂದಿ ವರ್ಗದವರು ಮೇಲಾಧಿಕಾರಿಗಳಿಗೆ ಒತ್ತಡ ತಂದಿದ್ದಾರೆ.ಹೀಗಾಗಿ ದೀಢೀರನೆ ಸ್ಥಗಿತಗೊಂಡಿರುವ ಸಫಾರಿಯಿಂದ ಪ್ರವಾಸಿಗರು ಅನ್ಯ ಮಾರ್ಗವಿಲ್ಲದೆ ಹಿಂದಿರುಗುತ್ತಿದ್ದಾರೆ.

ಬೆಂಗಳೂರು, ಮೈಸೂರು,ಕೇರಳ ಭಾಗದಿಂದ ಬಂದಿದ್ದ ಬಹಳಷ್ಟು ಪ್ರವಾಸಿಗರು ನಾಗರಹೊಳೆ ಪ್ರವೇಶದ ವೀರನಹೊಸಳ್ಳಿ ಮತ್ತು ನಾಣಚಿ ದ್ವಾರದಲ್ಲಿಯೇ ಸಾಲು ಗಟ್ಟಿ ನಿಂತಿದ್ದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.