ಸೋಮವಾರಪೇಟೆಯ ಪತ್ರಿಕಾ ಭವನದಲ್ಲಿ ಎಚ್.ಎಸ್. ವೆಂಕಟೇಶಮೂರ್ತಿ ಅವರ ನುಡಿನಮನ ಕಾರ್ಯಕ್ರಮ ನಡೆಯಿತು
ಸೋಮವಾರಪೇಟೆ: ಸಾಹಿತಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಅವರಿಗೆ ಇಲ್ಲಿನ ಕನ್ನಡ ಸಿರಿ ಬಳಗದ ವತಿಯಿಂದ ಭಾನುವಾರ ನುಡಿನಮನ ಸಲ್ಲಿಸಲಾಯಿತು.
‘ನಾಡು ಕಂಡ ಶ್ರೇಷ್ಠ ಸಾಹಿತಿಗಳಲ್ಲಿ ವೆಂಕಟೇಶಮೂರ್ತಿ ಒಬ್ಬರು. ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ನಾಟಕ, ಕವನ ಸಂಕಲನ ಸೇರಿದಂತೆ ಹಲವು ಪ್ರಕಾರಗಳಲ್ಲಿ ಅವರ ಸಾಹಿತ್ಯ ಸೇವೆಯನ್ನು ನೀಡಿರುವುದು ಶ್ಲಾಘನೀಯ’ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಮಾಜಿ ಕೋಶಾಧ್ಯಕ್ಷ ಎಸ್.ಎ. ಮುರಳೀಧರ್ ಹೇಳಿದರು.
ಗ್ರಾಮೀಣ ಪ್ರದೇಶದಿಂದ ಬಂದ ವೆಂಕಟೇಶಮೂರ್ತಿ ಅವರು, ಗ್ರಾಮೀಣ ಸೊಗಡಿನ ಮತ್ತು ಪರಿಸರದ ಕುರಿತು ನೈಜ ಕಾಳಜಿ ಹೊಂದಿದ್ದರು. ತಮ್ಮ ಅನುಭವದಿಂದಲೇ ಸಾಹಿತ್ಯ ರಚನೆಯಲ್ಲಿ ತೊಡಗಿದ್ದು ವಿಶೇಷ. ಅವರ ನಿಧನದಿಂದಾಗಿ ಕನ್ನಡ ನಾಡು ಒಬ್ಬ ಶ್ರೇಷ್ಠ ಸಾಹಿತಿಯನ್ನು ಕಳೆದುಕೊಂಡಂತಾಗಿದೆ ಎಂದರು.
ಕನ್ನಡ ಸಿರಿ ಬಳಗದ ಅಧ್ಯಕ್ಷ ಜವರಪ್ಪ, ಹಿರಿಯ ಸಾಹಿತಿಗಳಾದ ಜಲ ಕಾಳಪ್ಪ, ನ.ಲ. ವಿಜಯ ನುಡಿನಮನ ಸಲ್ಲಿಸಿದರು.
ಸಾಹಿತಿ ಸಿ.ಕೆ.ಮಲ್ಲಪ್ಪ, ಜಾನಪದ ಪರಿಷತ್ ನಿರ್ದೇಶಕಿ ರೇಣುಕಾ ವೆಂಕಟೇಶ್, ಶಿಕ್ಷಕಿ ಕವಿತಾ ಜನಾರ್ದನ್, ಹಿರಿಕರ ರವಿ ಇದ್ದರು.
ಗಾಯಕರಾದ ಶರ್ಮಿಳಾ ರಮೇಶ್, ಸುಮತಿ ವೆಂಕಟೇಶಮೂರ್ತಿ ರಚಿಸಿದ ಗೀತೆಗಳನ್ನು ಹಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.