ADVERTISEMENT

ರೋಟರಿ ವುಡ್ಸ್‌ನಿಂದ ಪೊಲಿಯೊ ನಿರ್ಮೂಲನಾ ಸಂದೇಶ ಅಭಿಯಾನ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 7:09 IST
Last Updated 25 ಅಕ್ಟೋಬರ್ 2025, 7:09 IST
ವಿಶ್ವ ಪೊಲೀಯೊ ನಿರ್ಮೂಲನಾ ದಿನದ ಅಂಗವಾಗಿ ರೋಟರಿ ಮಡಿಕೇರಿ ವುಡ್ಸ್‌ ವತಿಯಿಂದ ನಡೆದ ಪೊಲೀಯೊ ನಿರ್ಮೂಲನಾ ಸಂದೇಶದ ಪೋಸ್ಟರ್‌ಗಳನ್ನು ಅಳವಡಿಸುವ ಅಭಿಯಾನಕ್ಕೆ ನಗರಸಭಾಧ್ಯಕ್ಷೆ ಕಲಾವತಿ ನಗರಸಭೆ ಮುಂಭಾಗ ಚಾಲನೆ ನೀಡಿದರು.
ವಿಶ್ವ ಪೊಲೀಯೊ ನಿರ್ಮೂಲನಾ ದಿನದ ಅಂಗವಾಗಿ ರೋಟರಿ ಮಡಿಕೇರಿ ವುಡ್ಸ್‌ ವತಿಯಿಂದ ನಡೆದ ಪೊಲೀಯೊ ನಿರ್ಮೂಲನಾ ಸಂದೇಶದ ಪೋಸ್ಟರ್‌ಗಳನ್ನು ಅಳವಡಿಸುವ ಅಭಿಯಾನಕ್ಕೆ ನಗರಸಭಾಧ್ಯಕ್ಷೆ ಕಲಾವತಿ ನಗರಸಭೆ ಮುಂಭಾಗ ಚಾಲನೆ ನೀಡಿದರು.   

ಮಡಿಕೇರಿ: ವಿಶ್ವ ಪೊಲೀಯೊ ನಿರ್ಮೂಲನಾ ದಿನದ ಅಂಗವಾಗಿ ರೋಟರಿ ಮಡಿಕೇರಿ ವುಡ್ಸ್‌ ವತಿಯಿಂದ ನಡೆದ ಪೊಲೀಯೊ ನಿರ್ಮೂಲನಾ ಸಂದೇಶದ ಪೋಸ್ಟರ್‌ಗಳನ್ನು ಅಳವಡಿಸುವ ಅಭಿಯಾನಕ್ಕೆ ನಗರಸಭಾಧ್ಯಕ್ಷೆ ಕಲಾವತಿ ನಗರಸಭೆ ಮುಂಭಾಗ ಚಾಲನೆ ನೀಡಿದರು.

ಪ್ರತೀ ಮನೆಯಲ್ಲಿಯೂ 2ರಿಂದ 6 ವರ್ಷದ ಒಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪೊಲೀಯೊ ಲಸಿಕೆ ಹಾಕಿಸಿಕೊಳ್ಳುವಂತೆ ಇದೇ ವೇಳೆ ಕಲಾವತಿ ಮನವಿ ಮಾಡಿದರು. ರೋಟರಿ ವುಡ್ಸ್ ವತಿಯಿಂದ ಸಾರ್ವಜನಿಕರಲ್ಲಿ ಜಾಗೃತಿ ಉಂಟು ಮಾಡುವ ಈ ವಿನೂತನ ಅಭಿಯಾನವನ್ನು ಅವರು ಶ್ಲಾಘಿಸಿದರು.

ವಿಶ್ವದಾದ್ಯಂತ ಪೊಲೀಯೊ ನಿರ್ಮೂಲನೆಯಲ್ಲಿ ಅಂತರರಾಷ್ಟ್ರೀಯ ಸೇವಾ ಸಂಸ್ಥೆಯಾದ ರೋಟರಿ ಅತ್ಯಂತ ಮಹತ್ವದ ಪಾತ್ರ ವಹಿಸಿದ್ದು, ಲಕ್ಷಾಂತರ ಮಕ್ಕಳು ವಿಶೇಷಚೇತನರಾಗುವುದನ್ನು ಪೊಲೀಯೊ ನಿರೋಧಕ ಲಸಿಕೆ ಮೂಲಕ ರೋಟರಿ ತಪ್ಪಿಸಿದೆ ಎಂದು ರೋಟರಿ ವುಡ್ಸ್ ಅಧ್ಯಕ್ಷ ಕಿರಣ್ ಕುಂದರ್ ತಿಳಿಸಿದರು. ಜನರಲ್ಲಿ ಜಾಗೃತಿ ಉಂಟು ಮಾಡುವ ನಿಟ್ಟಿನಲ್ಲಿ ರೋಟರಿ ವುಡ್ಸ್ ವತಿಯಿಂದ ನಗರವ್ಯಾಪ್ತಿಯಲ್ಲಿ ಜಾಗೃತಿ ಸಂದೇಶದ ಪೋಸ್ಟರ್, ಬ್ಯಾನರ್‌ಗಳನ್ನು ಅಳವಡಿಸಲಾಗಿದೆ ಎಂದೂ ಅವರು ಹೇಳಿದರು.

ADVERTISEMENT

ರೋಟರಿ ವುಡ್ಸ್ ಕಾರ್ಯದರ್ಶಿ ಪ್ರಮೀಳಾ ಶೆಟ್ಟಿ, ನಿರ್ದೇಶಕರಾದ ಕೆ.ವಸಂತ್ ಕುಮಾರ್, ಧನಂಜಯ ಶಾಸ್ತ್ರಿ, ರವಿ ಪಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.