
ಗೋಣಿಕೊಪ್ಪಲು: ಪೊನ್ನಂಪೇಟೆ ಪಟ್ಟಣದಲ್ಲಿ ನೂತನ ವಿದ್ಯುತ್ ಕಂಬ ಹಾಗೂ ಕೇಬಲ್ ಅಳವಡಿಸುತ್ತಿರುವುದರಿಂದ ವಿದ್ಯುತ್ ಸ್ಥಗಿತವಾಗಿದ್ದು, ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.
ಪಟ್ಟಣ ಪಂಚಾಯಿತಿಯಿಂದ ಅಧ್ಯಕ್ಷ ಅಣ್ಣೀರ ಹರೀಶ್ ಟ್ಯಾಂಕರ್ ಮೂಲಕ ಮನೆಗಳಿಗೆ ತೆರಳಿ ನೀರು ಒದಗಿಸುತ್ತಿದ್ದಾರೆ. ವಿವಿಧ ಬಡಾವಣೆಗಳಲ್ಲಿ ಹಳೆಯ ವಿದ್ಯುತ್ ಕಂಬಗಳನ್ನು ಬದಲಾಯಿಸಿ , ಹೊಸ ಕಂಬ, ಕೇಬಲ್‌ಗಳನ್ನು ಅಳವಡಿಸಲಾಗುತ್ತಿದೆ. ಇದರಿಂದ ವಿದ್ಯುತ್ ಸ್ಥಗಿತ ಉಂಟಾಗಿದೆ. ಕುಡಿಯುವ ನೀರು ಪೂರೈಕೆಯೂ ಸ್ಥಗಿತವಗಿದೆ. ಈ ಸಂದರ್ಭ ಪಟ್ಟಣ ಪಂಚಾಯಿತಿ ನೀರು ಒದಗಿಸುತ್ತಿದೆ.
ಕುಡಿಯುವ ನೀರಿಗೆ ಸಮಸ್ಯೆ ಒಂದೆಡೆಯಾದರೆ, ಬೀದಿ ದೀಪಗಳಿಲ್ಲ, ಹೈ ಮಾಸ್ಟ್ ದೀಪಕೂಡ ಕೆಟ್ಟು ತಿಂಗಳು ಕಳೆದಿವೆ. ಸರಿಪಡಿಸಿ ಪಟ್ಟಣಕ್ಕೆ ಬೆಳಕು ನೀಡ ಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.