ADVERTISEMENT

ರಸ್ತೆ ಬದಿಯ ಸುರಿದಿದ್ದ ಕೋಳಿ ತ್ಯಾಜ್ಯ ತೆರವು

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2021, 3:49 IST
Last Updated 14 ಫೆಬ್ರುವರಿ 2021, 3:49 IST
ಶನಿವಾರಸಂತೆ ಸಮೀಪದ ಶಿವಪುರ ಗ್ರಾಮದ ರಾಜ್ಯ ಹೆದ್ದಾರಿ ಬದಿ ಸುರಿದಿದ್ದ ಕೋಳಿ ತ್ಯಾಜ್ಯವನ್ನು ಗೌಡಳ್ಳಿ ಪಂಚಾಯಿತಿಯವರು ತೆರವುಗೊಳಿಸಿದರು
ಶನಿವಾರಸಂತೆ ಸಮೀಪದ ಶಿವಪುರ ಗ್ರಾಮದ ರಾಜ್ಯ ಹೆದ್ದಾರಿ ಬದಿ ಸುರಿದಿದ್ದ ಕೋಳಿ ತ್ಯಾಜ್ಯವನ್ನು ಗೌಡಳ್ಳಿ ಪಂಚಾಯಿತಿಯವರು ತೆರವುಗೊಳಿಸಿದರು   

ಶನಿವಾರಸಂತೆ: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿವಪುರ ಗ್ರಾಮದ ರಾಜ್ಯ ಹೆದ್ದಾರಿ ಬದಿಯಲ್ಲಿ ಕೋಳಿ ತ್ಯಾಜ್ಯ ಸುರಿದಿರುವ ಬಗ್ಗೆ ‘ಪ್ರಜಾವಾಣಿ’ ಶುಕ್ರವಾರ (ಫೆ. 12ರಂದು) ‘ಶಿವಪುರ: ರಸ್ತೆ ಬದಿಯಲ್ಲೇ ತ್ಯಾಜ್ಯ’ ಶೀರ್ಷಿಕೆಯಡಿ ಸುದ್ದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ ಗೌಡಳ್ಳಿ ಪಂಚಾಯಿತಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ತ್ಯಾಜ್ಯ ತೆರವುಗೊಳಿಸಿದರು.

ಕೋಳಿ ತ್ಯಾಜ್ಯ ಸುರಿದಿರುವ ಪ್ರದೇಶದಲ್ಲಿ ದುರ್ವಾಸನೆ ಹರಡಿದ್ದು ರಸ್ತೆಯಲ್ಲಿ ಸಂಚರಿಸುವ ಪಾದಚಾರಿಗಳು ಮೂಗು ಮುಚ್ಚಿ ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಮನವಿ ಮಾಡಿದ ಕೂಡಲೇ ಕಸ ವಿಲೇವಾರಿ ವಾಹನದ ಜತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಿಖಿತಾ, ಸದಸ್ಯರಾದ ವೆಂಕಟೇಶ್, ಗಣೇಶ್, ಬಿಲ್ ಸಂಗ್ರಾಹಕ ಹೂವಯ್ಯ ಸ್ಥಳಕ್ಕೆ ಬಂದರು.

ಪಂಚಾಯಿತಿ ಸಿಬ್ಬಂದಿ ಪ್ರದೇಶವನ್ನು ಸ್ವಚ್ಛಗೊಳಿಸಿ, ಕೋಳಿ ತ್ಯಾಜ್ಯವನ್ನು ವಿಲೇವಾರಿ ಮಾಡಿದರು. ಮನವಿ ಸ್ಪಂದಿಸಿದ್ದಕ್ಕೆ ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ಹಾಗೂ ಕಾರ್ಯಕರ್ತರು ಧನ್ಯವಾದ ಸಲ್ಲಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.