ADVERTISEMENT

ಸೋಮವಾರಪೇಟೆ | ಭಾರಿ ಗಾಳಿ ಮಳೆ: ಹಾನಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 4:46 IST
Last Updated 18 ಜೂನ್ 2025, 4:46 IST
ಸೋಮವಾರಪೇಟೆ ಸಮೀಪದ ಕುಸೂಬೂರು ದೇವಾಲಯ ಬಳಿ ಬಸ್ ಏರಿ ವಿದ್ಯುತ್ ಮಾರ್ಗವನ್ನು ಸೆಸ್ಕ್ ಸಿಬ್ಬಂದಿಗಳು ಸರಿಪಡಿಸಿದರು
ಸೋಮವಾರಪೇಟೆ ಸಮೀಪದ ಕುಸೂಬೂರು ದೇವಾಲಯ ಬಳಿ ಬಸ್ ಏರಿ ವಿದ್ಯುತ್ ಮಾರ್ಗವನ್ನು ಸೆಸ್ಕ್ ಸಿಬ್ಬಂದಿಗಳು ಸರಿಪಡಿಸಿದರು   

ಸೋಮವಾರಪೇಟೆ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸೋಮವಾರ ರಾತ್ರಿ ಗಾಳಿಯೊಂದಿಗೆ ಧಾರಾಕಾರ ಮಳೆ ಸುರಿದಿದ್ದು, ಅಲ್ಲಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ.

ದೊಡ್ಡತೋಳೂರು ಗ್ರಾಮದ ದಿನೇಶ್ ಎಂಬುವವರ ಹಸು ಶೀತದಿಂದ ಕೊಟ್ಟಿಗೆಯಲ್ಲಿ ಮೃತಪಟ್ಟಿದೆ. ಸ್ಥಳಕ್ಕೆ ಪಶು ವೈದ್ಯರು ತೆರಳಿ ಪರಿಶೀಲಿಸಿದರು.

ಕುಸೂಬೂರು ದೇವಾಲಯದ ಮುಂಭಾಗ ರಾಜ್ಯ ಹೆದ್ದಾರಿಯ ಬದಿಯಲ್ಲಿದ್ದ ವಿದ್ಯುತ್ ಕಂಬದ ಮೇಲೆ ಮರಬಿದ್ದು, ಹೆದ್ದಾರಿಗೆ ವಿದ್ಯುತ್ ಕಂಬ ಮತ್ತು ಲೈನ್ ವಾಲಿದೆ. ಖಾಸಗಿ ಬಸ್ ಮೇಲೆ ನಿಂತು ಸೆಸ್ಕ್ ಸಿಬ್ಬಂದಿಗಳು ವಿದ್ಯುತ್ ಕಂಬ ಮತ್ತು ಮಾರ್ಗವನ್ನು ಸರಿಪಡಿಸಿದರು.

ADVERTISEMENT

ಬಜೆಗುಂಡಿ ಬಳಿ ವಿದ್ಯುತ್ ಮಾರ್ಗದ ಮೇಲೆ ಮರ ಬಿದ್ದು, ವಿದ್ಯುತ್ ಕಂಬ ಮುರಿದು ಬಿದ್ದಿದೆ. ಶುಂಠಿ ಗ್ರಾಮದ ಎಚ್.ಎಂ.ಜಿತೇಂದ್ರ ಎಂಬವರ ಲೈನ್ ಮನೆಯ ಶೀಟ್ ಗಾಳಿಗೆ ಹಾರಿಹೋಗಿದೆ.

ಕಳೆದ 24 ಗಂಟೆಗಳಲ್ಲಿ ಶಾಂತಳ್ಳಿ ಹೋಬಳಿಗೆ 14 ಸೆಂ.ಮಿ ಮಳೆಯಾಗಿದೆ. ಸೋಮವಾರಪೇಟೆ ಕಸಬಾ 7.4, ಶನಿವಾರಸಂತೆಗೆ 4.8, ಕೊಡ್ಲಿಪೇಟೆಗೆ 3.54 ಮಳೆಯಾಗಿದೆ.

ಸೋಮವಾರಪೇಟೆ ಸಮೀಪದ ಬಜೆಗುಂಡಿ ಬಳಿಯಲ್ಲಿ ವಿದ್ಯುತ್ ಕಂಬ ಮುರಿದು ಬಿದ್ದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.