
ಮಡಿಕೇರಿ: ತಾಲ್ಲೂಕಿನ ಬಲ್ಲಮಾವಟಿ ಗ್ರಾಮದ ನಾಲ್ನಾಡ್ ಹಾಕಿ ಕ್ಲಬ್ ವತಿಯಿಂದ 13ನೇ ವರ್ಷದ ನಾಲ್ನಾಡ್ ವ್ಯಾಪ್ತಿಯ ಅಂತರ ಗ್ರಾಮ ಹಾಕಿ ಪಂದ್ಯಾವಳಿ ಮತ್ತು ಹಗ್ಗಜಗ್ಗಾಟ ಸ್ಪರ್ಧೆ ಗ್ರಾಮದ ನೇತಾಜಿ ವಿದ್ಯಾಸಂಸ್ಥೆಯ ಮೈದಾನದಲ್ಲಿ ಮಾರ್ಚ್ 29ರಿಂದ 5 ದಿನಗಳ ಕಾಲ ನಡೆಯಲಿದೆ.
‘ನಾಲ್ನಾಡ್ ವ್ಯಾಪ್ತಿಯ ಬಲ್ಲಮಾವಟಿ, ನಾಪೋಕ್ಲು, ಕಕ್ಕಬೆ-ಕುಂಜಿಲ, ಎಮ್ಮೆಮಾಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ 14 ಗ್ರಾಮಗಳ ಯಾವುದೇ ಜನಾಂಗದ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಬಹುದು. ಜೊತೆಗೆ, ನಾಲ್ನಾಡು ವ್ಯಾಪ್ತಿಯ ಪ್ರೌಢಶಾಲಾ ಮಕ್ಕಳಿಗೆ ಅಂತರ್ ಶಾಲಾ ಮಟ್ಟದ ಹಾಕಿ ಪಂದ್ಯಾವಳಿಯೂ ನಡೆಯಲಿದೆ’ ಎಂದು ಕ್ರೀಡಾಕೂಟದ ಸಂಚಾಲಕ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಇಲ್ಲಿ ಶುಕ್ರವಾರ ತಿಳಿಸಿದರು.
ಏಪ್ರಿಲ್ 2ರಿಂದ ಬೇಸಿಗೆ ರಜೆ ವೇಳೆ ಮಕ್ಕಳಿಗೆ ನುರಿತ ತರಬೇತುದಾರರಿಂದ 20 ಶಿಬಿರ ದಿನಗಳ ಕಾಲ ಉಚಿತ ತರಬೇತಿ ಹಮ್ಮಿಕೊಳ್ಳಲಾಗುವುದು. ನೋಂದಣಿಗೆ ಮಾರ್ಚ್ 15 ಕೊನೆಯ ದಿನ ಎಂದು ಹೇಳಿದರು.
ಕ್ಲಬ್‌ನ ಕರವಂಡ ಸುರೇಶ್, ಮಚ್ಚುರ ಯದುಕುಮಾರ್, ಅಪ್ಪಚಟ್ಟೋಳಂಡ ಹರ್ಷಿತ್ ಅಯ್ಯಪ್ಪ, ಕೋಟೆರ ಬೋಪಣ್ಣ, ಪಾಲೆಯಡ ಸಂತೋಷ್ ದೇವಯ್ಯ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.