ADVERTISEMENT

ವಿರಾಜಪೇಟೆ ರಸ್ತೆ ಕಾಮಗಾರಿ ವಿಳಂಬ: ಅ.23ರಂದು ಸ್ವಯಂ ಪ್ರೇರಿತ ಸಿದ್ದಾಪುರ ಬಂದ್

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 4:05 IST
Last Updated 15 ಅಕ್ಟೋಬರ್ 2025, 4:05 IST
ನಾಗರಿಕ ಹೋರಾಟ ಸಮಿತಿ ಸಭೆಯಲ್ಲಿ ಬಂದ್ ನಡೆಸಲು ತೀರ್ಮಾನಿದ್ದು, ಪ್ರಮುಖರು ಭಾಗವಹಿಸಿದ್ದರು
ನಾಗರಿಕ ಹೋರಾಟ ಸಮಿತಿ ಸಭೆಯಲ್ಲಿ ಬಂದ್ ನಡೆಸಲು ತೀರ್ಮಾನಿದ್ದು, ಪ್ರಮುಖರು ಭಾಗವಹಿಸಿದ್ದರು   

ಸಿದ್ದಾಪುರ: ಸಿದ್ದಾಪುರ-ವಿರಾಜಪೇಟೆ ರಸ್ತೆ ಕಾಮಗಾರಿ ವಿಳಂಬ ಮಾಡಲಾಗುತ್ತಿದೆ ಎಂದು ಅ.23 ರಂದು ಸಿದ್ದಾಪುರ ಪಟ್ಟಣವನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ನಾಗರಿಕ ಹೋರಾಟ ಸಮಿತಿಯ ಅಧ್ಯಕ್ಷ ವಿ.ಕೆ. ಗಿರೀಶ್ ತಿಳಿಸಿದ್ದಾರೆ.

‘11 ತಿಂಗಳಿನಿಂದ ಕೇವಲ 2 ಕಿ.ಮೀ. ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಚರಂಡಿ ಕಾಮಗಾರಿ  ಅವೈಜ್ಞಾನಿಕವಾಗಿದೆ. ನಿಧಾನಗತಿಯಲ್ಲಿ ನಡೆಯುತ್ತಿರುವ ಕಾಮಗಾರಿಯಿಂದ ಶಾಲಾ ಮಕ್ಕಳು,  ಜನರು ಸಂಕಷ್ಟ ಎದುರಿಸುವಂತಾಗಿದೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಕೆಸರು ರಸ್ತೆಯಲ್ಲಿ ಬಸ್‌ ಸಿಲುಕಿ 2 ಗಂಟೆ ಸಂಚಾರ ಸ್ಥಗಿತಗೊಂಡಿತ್ತು.  ನಂತರವೂ ಕಾಮಗಾರಿಯನ್ನು ತ್ವರಿತಗೊಂಡಿಲ್ಲ.  ವಿವಿಧ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ನೇತೃತ್ವದಲ್ಲಿ ಸ್ವಯಂಪ್ರೇರಿತವಾಗಿ ಅ.23 ರಂದು ಸಿದ್ದಾಪುರ ಬಂದ್ ಮಾಡಲು ನಿರ್ಧರಿಸಲಾಗಿದೆ’ ಎಂದರು.

ಸಾಮಾಜಿಕ ಕಾರ್ಯಕರ್ತ ಎ.ಎಸ್ ಮುಸ್ತಫ ಮಾತನಾಡಿ,   ಲೊಕೋಪಯೋಗಿ ಇಲಾಖೆಯ ಎಂಜಿನಿಯರ್ ತಮ್ಮ ಜವಾಬ್ದಾರಿಯನ್ನು ಮರೆತಂತಿದೆ.  ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.  ರೂಪೇಶ್ ಮಾತನಾಡಿ, ವಿರಾಜಪೇಟೆ ರಸ್ತೆಯಲ್ಲಿ ಆಸ್ಪತ್ರೆ, ಶಾಲೆಗಳಿದ್ದು, ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ.  ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಲು ಒತ್ತಾಯಿಸಿ ಬಂದ್ ಮಾಡಲಾಗುತ್ತಿದೆ ಎಂದರು.

ADVERTISEMENT

 ಅಬೂಬಕ್ಕರ್, ಅಬ್ದುಲ್ ಕರೀಂ, ಡಿಜಿತ್, ಹುಸೈನ್, ರಿಯಾಜ್, ಭಾಗ್ಯನಾಥ್, ಎಂ.ಎ. ಆನಂದ, ಸಿದ್ದಿಕ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.