ಗೋಣಿಕೊಪ್ಪಲು: ಬಾಳೆಲೆ ಸಮೀಪದ ಕೊಟ್ಟಗೇರಿಯಲ್ಲಿ ಕಾಫಿ ಮಂಡಳಿಯಿಂದ ಶನಿವಾರ ಸಂಚಾರಿ ಮಣ್ಣು ಪರೀಕ್ಷಾ ಅಭಿಯಾನ ನಡೆಸಲಾಯಿತು.
ಕೊಟ್ಟಗೇರಿ ಸಮುದಾಯ ಭವನದಲ್ಲಿ ಲಕ್ಷ್ಮಣತೀರ್ಥ ಸಂಘದ ಸಹಕಾರದೊಂದಿಗೆ ನಡೆದ ಮಣ್ಣು ಪರೀಕ್ಷಾ ಅಭಿಯಾನದಲ್ಲಿ 43 ಬೆಳೆಗಾರರು ಮಣ್ಣು ಪರೀಕ್ಷೆ ಮಾಡಿಸಿದರು. ಕಾಫಿ ಮಂಡಳಿ ಮಣ್ಣು ಪರೀಕ್ಷೆ ತಜ್ಞರು ಮಣ್ಣಿನಲ್ಲಿ ಸುಣ್ಣದ ಪ್ರಮಾಣದ ಶಿಫಾರಸ್ಸಿನ ಫಲಿತಾಂಶ ನೀಡಿದರು.
ಮಣ್ಣು ಪರೀಕ್ಷಾ ವಿಜ್ಞಾನಿ ಪ್ರಫುಲ್ಲಾಕುಮಾರಿ ಮಣ್ಣು ಪರೀಕ್ಷೆಯ ಮಹತ್ವ ಹಾಗೂ ಗೊಬ್ಬರದ ನಿರ್ವಹಣೆ ಬಗ್ಗೆ ಸಮಗ್ರ ಮಾಹಿತಿ ನೀಡಿ, ‘ಮಣ್ಣು ಪರೀಕ್ಷೆಯನ್ನು ಬೆಳೆಗಾರರು ಕಡ್ಡಾಯವಾಗಿ ಮಾಡಿಸಿಕೊಂಡು ಬಳಿಕ ಬೆಳೆಗಳಿಗೆ ನೀಡುವ ಗೊಬ್ಬರದ ಪ್ರಮಾಣವನ್ನು ಅರಿತುಕೊಳ್ಳಬೇಕು’ ಎಂದು ಹೇಳಿದರು.
ಕಾಫಿ ಮಂಡಳಿ ಕಿರಿಯ ಸಂಪರ್ಕ ಅಧಿಕಾರಿಗಳಾದ ಮುಖಾರಿಬ್ ಮಾತನಾಡಿ, ‘ಕಾಫಿ ಬೆಳೆಗಾರರು ಸೂಕ್ತ ಸಮಯದಲ್ಲಿ ಕಾಫಿ ತೋಟಕ್ಕೆ ಅಗತ್ಯವಿರುವಷ್ಟು ನೆರಳು ಬಿಡಬೇಕು. ಮರದ ರೆಂಬೆ ತೆಗಯುವ ವೈಜ್ಞಾನಿಕವಾಗಿ ತೆಗೆಸಬೇಕು. ಕಾಫಿ ಚಿಗುರುಗಳನ್ನು ಕೂಡ ಎಚ್ಚರಿಕೆಯಿಂದ ತೆರವುಗೊಳಿಸಬೇಕು ಎಂದು ಸಲಹೆ ನೀಡಿದರು. ಹಾಗೆಯೆ ಗಿಡಗಳಿಗೆ ಬೇಕಾದ ನೀರಿನ ಪ್ರಮಾಣ, ಸುಣ್ಣ ಮತ್ತು ಗೊಬ್ಬರದ ಪ್ರಮಾಣದ’ ಬಗ್ಗೆ ಮಾಹಿತಿ ನೀಡಿದರು.
ಲಕ್ಷ್ಮಣತೀರ್ಥ ಸಂಘದ ಅಧ್ಯಕ್ಷ ಮಚ್ಚಮಾಡ ಅಯ್ಯಪ್ಪ, ಕಾರ್ಯದರ್ಶಿ ಮಾಚಂಗಡ ಸುಬ್ರಮಣಿ, ಮುಖಂಡರಾದ ಅರಮಣಮಾಡ ಸತೀಶ್ ದೇವಯ್ಯ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.