ಸೋಮವಾರಪೇಟೆ: ಐಗೂರು ಗ್ರಾಮದ ಆದಿಶಕ್ತಿ ಮಹಾತಾಯಿ, ಪಾಷಾಣಮೂರ್ತಿ ದೇವಾಲಯದಲ್ಲಿ ಈಚೆಗೆ 49ನೇ ವರ್ಷದ ದೈವಕೋಲ ನೇಮೋತ್ಸವ 6 ದಿನ ನಡೆಯಿತು.
ಗಣಪತಿ ಹೋಮ, ಕಳಸದ ಮೆರವಣಿಗೆ, ಬೆಳಿಗ್ಗೆ 10ಕ್ಕೆ ಮಹಾಪೂಜೆ, ಆಧಿಶಕ್ತಿ ಮಹಾತಾಯಿ ದರ್ಶನ ನಡೆಯಿತು. ಪಾಷಾಣಮೂರ್ತಿ ಮತ್ತು ಕಲ್ಲಡ ದೈವ , ಕುಪ್ಪೆ ಪಂಜುರ್ಲಿ ದೈವ , ಕೊರತಿ ದೈವ , ಕೊರಗಜ್ಜ ಕೋಲ, ಧರ್ಮ ದೈವದ ಕೋಲಗಳು, ಬಂಡಾರ ನಿರ್ಗಮನ ಮತ್ತು ಮಹಾಪೂಜೆ ನಡೆದವು.
ದೇವಾಲಯ ಸಮಿತಿಯ ಪದಾಧಿಕಾರಿಗಳಾದ ಆನಂದ ಪೂಜಾರಿ, ಧರ್ಮಪ್ಪ, ಸಂದೇಶ್ ಕುಮಾರ್, ಇಂದ್ರೇಶ್, ಸೀನ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.