ಸೋಮವಾರಪೇಟೆ: ಶತಮಾನದ ಹಿಂದೆ ಪ್ರಾರಂಭವಾದ ಇನ್ನರ್‌ವೀಲ್ ಕ್ಲಬ್ ಮಹಿಳೆಯರ ಅಭ್ಯುದಯಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಜಿಲ್ಲಾ ಸಂಯೋಜಕಿ ಪೂರ್ಣಿಮಾ ರವಿ ಅಭಿಪ್ರಾಯಿಸಿದರು.
ಬುಧವಾರ ಇಲ್ಲಿ ನಡೆದ 2024-25ನೇ ಸಾಲಿನ ಕ್ಲಬ್ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಥೆ ಹತ್ತು ಹಲವು ಸಮಾಜಮುಖಿ ಕೆಲಸಗಳನ್ನು ಮಾಡಿ ಇದೀಗ 101ನೇ ವರ್ಷಕ್ಕೆ ಕಾಲಿರಿಸಿದೆ. ಸಾಕಷ್ಟು ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಸಂಸ್ಥೆ ನೆರವಾಗಿದೆ. ಪ್ರಸಕ್ತ ಸಾಲಿನಲ್ಲಿ ಮಳೆ ನೀರು ಸಂಗ್ರಹ, ಶಿಕ್ಷಣ, ಸ್ಯಾನಿಟೇಷನ್, ಆರೋಗ್ಯ ಯೋಜನೆಗಳನ್ನು ಕೇಂದ್ರ ಸಮಿತಿ ಹಮ್ಮಿಕೊಂಡಿದೆ. ಗ್ರಾಮಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಗೆ ಶ್ರಮಿಸಬೇಕು. ಸದಸ್ಯ ಬಲ ಹೆಚ್ಚಿಸಬೇಕು ಎಂದರು.
ಅಧಿಕಾರ ಸ್ವೀಕರಿಸಿದ ಅಧ್ಯಕ್ಷೆ ಸಂಗೀತಾ ದಿನೇಶ್ ಮಾತನಾಡಿ, ಯವುದೇ ಕೆಲಸಗಳನ್ನು ಇಷ್ಟಪಟ್ಟು ಮಾಡಿದಲ್ಲಿ ಮಾತ್ರ ಯೋಜನೆಗಳು ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದರು ಉಪಾಧ್ಯಕ್ಷೆ ತನ್ಮಯಿ ಪ್ರವೀಣ್, ಕಾರ್ಯದರ್ಶಿ ಸುಮಲತಾ ಪುರುಷೋತ್ತಮ್, ಐಪಿಪಿ ಸಂಧ್ಯಾರಾಣಿ, ಖಜಾಂಚಿ ಸೌಮ್ಯ ಸತೀಶ್, ಪದಾಧಿಕಾರಿಗಳಾದ ಅಮೃತಾ ಕಿರಣ್, ಸವಿತಾ ರಾಜು, ಲತಾ ನಾಗೇಶ್, ಲತಾ ಮಂಜು, ಆಶಾ ಮೋಹನ್ ಅವರುಗಳು ಅಧಿಕಾರ ಸ್ವೀಕರಿಸಿದರು. ವೇದಿಕೆಯಲ್ಲಿ ಸಂದ್ಯಾರಾಣಿ ಭಾಗವಹಿಸಿದ್ದರು.
ಸುವಿನಾ ಕೃಪಾಲ್ ಸಂಪಾದಕತ್ವದ ಸ್ಮರಣ ಸಂಚಿಕೆಯನ್ನು ರೋಟರಿ ಸಂಸ್ಥೆಯ ಅಧ್ಯಕ್ಷ ಜೆ.ಕೆ. ಪೊನ್ನಪ್ಪ ಬಿಡುಗಡೆಗೊಳಿಸಿದರು. ಮೈಸೂರಿನ ಇನ್ನರ್‌ವೀಲ್ ಸಂಸ್ಥೆಯ ನಂದಿನಿ ಪ್ರಭು ಮತ್ತು ಸುಮತಿ ಅವರನ್ನು ಸನ್ಮಾನಿಸಲಾಯಿತು. ಅಂಗವಿಕಲ ವಿದ್ಯಾರ್ಥಿ ಮತ್ತು ಹೃದಯ ರೋಗದಿಂದ ಬಳಲುತ್ತಿದ್ದ ವಿದ್ಯಾರ್ಥಿಗೆ ಆರ್ಥಿಕ ನೆರವು ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.