ADVERTISEMENT

ತಾಯಿ ಸತ್ತ ದುಃಖದ ನಡುವೆಯೂ ಕರ್ತವ್ಯ ಪ್ರಜ್ಞೆ ತೋರಿದ ಶಿಕ್ಷಕಿ

ಎಸ್ಸೆಸ್ಸೆಲ್ಸಿ ಮೌಲ್ಯಮಾಪನ

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 11:38 IST
Last Updated 13 ಜುಲೈ 2020, 11:38 IST
ಶಿಕ್ಷಕಿ ಕವಿತಾ
ಶಿಕ್ಷಕಿ ಕವಿತಾ   

ಮಡಿಕೇರಿ: ತಾಯಿ ಸಾವನ್ನಪ್ಪಿದ ದುಃಖದಲ್ಲೂ ಶಿಕ್ಷಕಿಯೊಬ್ಬರು ನಗರದಲ್ಲಿ ಸೋಮವಾರ ನಡೆದ ಎಸ್ಸೆಸ್ಸೆಲ್ಸಿ ಮೌಲ್ಯಮಾಪನಕ್ಕೆ ಹಾಜರಾಗಿ ಕರ್ತವ್ಯ ಪ್ರಜ್ಞೆ ತೋರಿದರು.

ತಾಲ್ಲೂಕಿನ ಬೆಟ್ಟಿಗೇರಿಯ ಶಿಕ್ಷಕಿ ಕವಿತಾ ಅವರ ತಾಯಿ ವಯೋಸಹಜ ಅನಾರೋಗ್ಯದಿಂದ ಸೋಮವಾರ ಮುಂಜಾನೆ ಮೃತಪಟ್ಟಿದ್ದರು. ಆ ದುಃಖದಲ್ಲೂ ಕವಿತಾ ಅವರು ನಗರದ ಸೇಂಟ್‌ ಮೈಕಲರ ಶಾಲೆಯಲ್ಲಿ ನಡೆದ ಮೌಲ್ಯಮಾಪನಕ್ಕೆ ಹಾಜರಾಗಿದ್ದರು. ಬಳಿಕ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡರು.

‘ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ವಿಳಂಬವಾಗಿ ನಡೆದಿವೆ. ವಿದ್ಯಾರ್ಥಿಗಳ ಭವಿಷ್ಯವೂ ಮುಖ್ಯ. ಹೀಗಾಗಿ, ಮೌಲ್ಯಮಾಪನಕ್ಕೆ ಬಂದೆ’ ಎಂದು ಕವಿತಾ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.