ADVERTISEMENT

ಕುಶಾಲನಗರ | ‘ಮಕ್ಕಳ ಪ್ರತಿಭೆ ಅನಾವರಣ’

ಕುಶಾಲನಗರ : ಪ್ರತಿಭಾ ಕಾರಂಜಿ, ಸಾಂಸ್ಕೃತಿಕ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 5:16 IST
Last Updated 22 ನವೆಂಬರ್ 2025, 5:16 IST
ಕುಶಾಲನಗರ ಫಾತಿಮಾ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಕ್ಕಳ ಪ್ರತಿಭಾ ಕಾರಂಜಿ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿವಿಧ ಶಾಲಾ ಮಕ್ಕಳು ಛದ್ಮವೇಷಧಾರಿಗಳಾಗಿ ಪ್ರೇಕ್ಷಕರ ಗಮನ ಸೆಳೆಯಿತು.
ಕುಶಾಲನಗರ ಫಾತಿಮಾ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಕ್ಕಳ ಪ್ರತಿಭಾ ಕಾರಂಜಿ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿವಿಧ ಶಾಲಾ ಮಕ್ಕಳು ಛದ್ಮವೇಷಧಾರಿಗಳಾಗಿ ಪ್ರೇಕ್ಷಕರ ಗಮನ ಸೆಳೆಯಿತು.   

ಕುಶಾಲನಗರ: ಪ್ರತಿಭಾ ಕಾರಂಜಿ  ಮಕ್ಕಳಲ್ಲಿ ಶಿಕ್ಷಣ, ಮನರಂಜನೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಉತ್ತಮ ವೇದಿಕೆಯಾಗಿದೆ ಎಂದು ಫಾತಿಮಾ ಕಾನ್ವೆಂಟ್ ವಿದ್ಯಾ ಸಂಸ್ಥೆಯ ಮುಖ್ಯಶಿಕ್ಷಕಿ ಸಿಸ್ಟರ್ ಚೇತನ ಹೇಳಿದರು.

  ಕಾನ್ವೆಂಟ್ ಸಭಾಂಗಣದಲ್ಲಿ  ಶುಕ್ರವಾರ ಏರ್ಪಡಿಸಿದ್ದ ಪ್ರತಿಭಾ ಕಾರಂಜಿಉದ್ಘಾಟಿಸಿ ಅವರು ಮಾತನಾಡಿದರು.   ಶಿಕ್ಷಣ ಇಲಾಖೆ, ಕುಶಾಲನಗರ ಕ್ಲಸ್ಟರ್ ಕೇಂದ್ರದ ಆಶ್ರಯದಲ್ಲಿ ಆಯೋಜಿಸಲಾಗಿತ್ತು. ಮಕ್ಕಳಲ್ಲಿನ ಸುಪ್ತ ಪ್ರತಿಭೆ, ಜೀವನ ಕೌಶಲ ಹೊಂದಲು ವೇದಿಕೆಯಾಗಿದೆ. ಪೋಷಕರು ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.

‌‌‌ ಕುಶಾಲನಗರ ಸಮೂಹ ಸಂಪನ್ಮೂಲ ವ್ಯಕ್ತಿ ಟಿ.ಇ. ವಿಶ್ವನಾಥ ಮಾತನಾಡಿ,ಪ್ರತಿಭಾ ಕಾರಂಜಿ  ದೇಶದ ಸಂಸ್ಕೃತಿ ಪರಂಪರೆ ಅನಾವರಣಗೊಳ್ಳುತ್ತದೆ ಎಂದರು.ಸಿಸ್ಟರ್ ಆಗ್ನೇಶ್ , ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಜಾನ್ಸನ್, ಡಿ.ಕೆ.ಸುರೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರಾದ ಎಚ್.ಎಸ್. ಉಮಾದೇವಿ , ಬಿ.ಬಿನ್ ಕುಮಾರ್ ,  ಮುಖ್ಯ ಶಿಕ್ಷಕರಾದಸಣ್ಣಸ್ವಾಮಿ, ವಸಂತಕುಮಾರ್, ಜಲಜಾಕ್ಷಿ, ಶಾಂತಲಾ,ಸಿಆರ್‌ಪಿಗಳಾದ ವೈಶಾಲಿ, ರತ್ನಮ್ಮ, ನಿವೃತ್ತ ಚಿತ್ರಕಲಾ ಶಿಕ್ಷಕ ಉ. ರಾ.ನಾಗೇಶ್, ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಶಶಿಕುಮಾರ್, ಶಿಕ್ಷಕರಾದ ಎಸ್.ಆರ್.ಶಿವಲಿಂಗ, ಜಂಶೀರ್ ಖಾನ್ ಅಹ್ಮದ್, ಶಿಕ್ಷಕರು, ಪೋಷಕರು,ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ADVERTISEMENT

 ಮಕ್ಕಳು ಕಂಠಪಾಠ, ಧಾರ್ಮಿಕ ಪಠಣ, ಛದ್ಮವೇಷ ಸ್ಪರ್ಧೆ, ರಸಪ್ರಶ್ನೆ, ರಂಗೋಲಿ, ಜಾನಪದ ಗೀತೆ, ಕವ್ವಾಲಿ, ಕ್ಲೇ ಮಾಡಲಿಂಗ್, ಭಾಷಣ ಮತ್ತು ಪ್ರಬಂಧ  ಸ್ಪರ್ಧೆಗಳಲ್ಲಿ ಮಕ್ಕಳು ಪ್ರತಿಭಾ ಪ್ರದರ್ಶನ ಮಾಡಿದರು..

ಕುಶಾಲನಗರ ಫಾತಿಮಾ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಕ್ಕಳ ಪ್ರತಿಭಾ ಕಾರಂಜಿ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು.
ಮಕ್ಕಳ ಛದ್ಮವೇಷ ಸ್ಪರ್ಧೆ ಗಮನ ಸೆಳೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.