ADVERTISEMENT

ಸುಂಟಿಕೊಪ್ಪ: ಗೌರಿ–ಗಣೇಶೋತ್ಸವ ಆಚರಣೆ 26ರಿಂದ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 6:16 IST
Last Updated 24 ಆಗಸ್ಟ್ 2025, 6:16 IST
ಸುಂಟಿಕೊಪ್ಪ ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಸಮಿತಿಯಿಂದ 60ನೇ ವರ್ಷದ ಗೌರಿ ಗಣೇಶೋತ್ಸವದ ಪ್ರಯುಕ್ತ ಶನಿವಾರ ಗಣೇಶ ಮೂರ್ತಿ ಪ್ರತಿಷ್ಠಾಪನೆ ನೆರವೇರಿತು
ಸುಂಟಿಕೊಪ್ಪ ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಸಮಿತಿಯಿಂದ 60ನೇ ವರ್ಷದ ಗೌರಿ ಗಣೇಶೋತ್ಸವದ ಪ್ರಯುಕ್ತ ಶನಿವಾರ ಗಣೇಶ ಮೂರ್ತಿ ಪ್ರತಿಷ್ಠಾಪನೆ ನೆರವೇರಿತು   

ಸುಂಟಿಕೊಪ್ಪ: ಇಲ್ಲಿನ ಮಾದಾಪುರ ರಸ್ತೆಯ ಶ್ರೀ ವೃಕ್ಷೋದ್ಭವ ಶಕ್ತಿ ಗಣಪತಿ ದೇವಸ್ಥಾನದಲ್ಲಿ ಆ‌. 26 ರಂದು ಬೆಳಿಗ್ಗೆ 9.45 ರಿಂದ 10.40 ರವರೆಗೆ ಸಲ್ಲುವ ತುಲಾ ಲಗ್ನದಲ್ಲಿ ದೇವಸ್ಥಾನದ ಆವರಣದಲ್ಲಿ ಗೌರಿ ಪ್ರತಿಷ್ಠಾಪನೆ ನಡೆಯಲಿದೆ.

ಆ. 27 ರಂದು ಬುಧವಾರ ಮಧ್ಯಾಹ್ನ 12 ಗಂಟೆಗೆ ಶಕ್ತಿ ಗಣಪತಿಗೆ ವಿಶೇಷ ಪೂಜೆ ಹಾಗೂ ಮಹಾ ಮಂಗಳಾರತಿ ನಡೆಯಲಿದೆ. ಅಂದು ಸಂಜೆ 5 ಗಂಟೆಗೆ ವಿವಿಧ ಪೂಜಾ ವಿಧಿವಿಧಾನಗಳ ನಂತರ ಹರದೂರು ಹೊಳೆಯಲ್ಲಿ ಗೌರಿಯನ್ನು ವಿಸರ್ಜಿಸಲಾಗುವುದೆಂದು ಶ್ರೀ ವೃಕ್ಷೋದ್ಭವ ಶಕ್ತಿ ಗಣಪತಿ ದೇವಸ್ಥಾನದ ಟ್ರಸ್ಟ್ ಕಾರ್ಯದರ್ಶಿ ಎ.ಲೋಕೇಶ್‌ಕುಮಾರ್ ತಿಳಿಸಿದ್ದಾರೆ.


ಸಮೀಪದ ಕೊಡಗರಹಳ್ಳಿಯ ಶ್ರೀ ವಿಘ್ನೇಶ್ವರ ಸೇವಾ ಸಮಿತಿ ವತಿಯಿಂದ 7ನೇ ವರ್ಷದ ಗೌರಿ ಗಣೇಶೋತ್ಸವವು 3 ದಿನಗಳ ಕಾಲ ವಿಶೇಷಪೂಜಾ ಕೈಂಕಾರ್ಯಗಳು ನಡೆಯಲಿದೆ.
ಕೊಡಗರಹಳ್ಳಿಯ ದೇವಯ್ಯ ಬಡಾವಣೆಯಲ್ಲಿ ಗೌರಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ನಡೆಯಲಿದೆ‌.

ADVERTISEMENT

ಆ.27ರಂದು ಸಂಜೆ 6 ಗಂಟೆಗೆ ಶ್ರೀ ಬೈತೂರಪ್ಪ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ, ತಾ.28ರಂದು 6 ಗಂಟೆಯಿಂದ ಮಕ್ಕಳು ಹಾಗೂ ಸಾರ್ವಜನಿಕರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 8. ಗಂಟೆಯಿಂದ ವಿಶಾಲ್ ಸುವರ್ಣ ನಿರ್ದೇಶನದ ತುಳು ನಾಟಕ ' ಎನ್ಬನ್ ಎನ್ನತೆಗೆ ಬುಡ್ಲೆ' ನಡೆಯಲಿದ್ದು, ನಂತರ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಆ.29ರಂದು ಪೂಜೆಯ ನಂತರ ಮಹಾ ಮಂಗಳಾರತಿ, ಅನ್ನ ಸಂತರ್ಪಣೆ ನಡೆಯಲಿದ್ದು, ಸಂಜೆ 3 ಗಂಟೆಗೆ ಗೌರಿ ಗಣೆಶ ಉತ್ಸವ ಮೂರ್ತಿಯನ್ನು ಭವ್ಯ ಮಂಟಪದಲ್ಲಿರಿಸಿ ಮೆರವಣಿಗೆ ನಂತರ ಕೊಡಗರಹಳ್ಳಿ ಸಮೀಪದ ಕೆರೆಯಲ್ಲಿ ವಿಸರ್ಜಿಸಲಾಗುವುದು ಎಂದು ವಿಘ್ನೇಶ್ವರ ಸೇವಾ ಸಮಿತಿ ಅಧ್ಯಕ್ಷರು ಪದಾಧಿಕಾರಿಗಳು ತಿಳಿಸಿದ್ದಾರೆ.


ಕೆದಕಲ್ ಗ್ರಾಮ ಪಂಚಾಯಿತಿಯ ಹೊರೂರು ಮಠ ಗೌರಿ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ ಹೊರೂರು ಮಠದಲ್ಲಿ ಆ‌.27 ರಂದು ಬೆಳಿಗ್ಗೆ 6ಗಂಟೆಗೆ ಗಣಪತಿ ಹೋಮದ ನಂತರ ಗೌರಿ ಗಣೇಶÀ ಉತ್ಸವ ಮೂರ್ತಿಗಳನ್ನು ಪ್ರತಿಸ್ಠಾಪಿಸಿ ಆ‌.30ರ ವರೆಗೆ ಮಾಹಾ ಪೂಜೆ, ಮಂಗಳಾರತಿ, ಪ್ರಸಾದ ವಿತರಣೆ ಕಾರ್ಯವು ನಡೆಯಲಿದೆ. ಆ‌.31ರಂದು ಬಾನುವಾರ ವಿಶೇಷ ಪೂಜೆ, ಮಹಾಪೂಜೆ, ಮಂಗಳಾರತಿ, ಅನ್ನದಾನ, ನಂತರ ಸಂಜೆ ಮೂರು ಗಂಟೆಯ ನಂತರ ವಿದ್ಯುತ್ ಅಲಂಕೃತ ಭವ್ಯ ಮಂಟಪದಲ್ಲಿ ಶ್ರೀ ಗೌರಿ ಗಣೇಶ ಉತ್ಸವ ಮೂರ್ತಿಗಳನ್ನು ಮೆರವಣಿಗೆ ಮೂಲಕ ಹೊರೂರು ಮಠದ ಕೆರೆಯಲ್ಲಿ ವಿಸರ್ಜಿಸಲಾಗುವುದೆಂದು ಗೌರಿ ಗಣೇಶೋತ್ಸವ ಸೇವಾ ಸಮಿತಿಯ ದೇವಿಪ್ರಸಾದ್ ಕಾಯರ್‌ಮಾರ್, ಬಿ.ಕೆ.ನಾಗಪ್ಪ, ಕೃಷ್ಣಪ್ಪ, ಭರತ್ ಪಧಾದಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.