ADVERTISEMENT

ಸುಂಟಿಕೊಪ್ಪ: ಮುಂದುವರಿದ ಮಳೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 4:00 IST
Last Updated 20 ಸೆಪ್ಟೆಂಬರ್ 2020, 4:00 IST
ಸುಂಟಿಕೊಪ್ಪದಲ್ಲಿ ಶನಿವಾರ ಧಾರಾಕಾರವಾಗಿ ಮಳೆ ಆಯಿತು
ಸುಂಟಿಕೊಪ್ಪದಲ್ಲಿ ಶನಿವಾರ ಧಾರಾಕಾರವಾಗಿ ಮಳೆ ಆಯಿತು   

ಸುಂಟಿಕೊಪ್ಪ: ಸುಂಟಿಕೊಪ್ಪ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಶನಿವಾರ ಧಾರಾಕಾರ ಮಳೆ ಸುರಿಯಿತು.

ಕಳೆದೆರಡು ದಿನಗಳಿಂದ ಬಿಡುವು ನೀಡಿ ಸುರಿಯುತ್ತಿದ್ದ ಮಳೆ ಶುಕ್ರವಾರ ಸಂಜೆಯಿಂದ ಎಡೆಬಿಡದೇ ಬರುತ್ತಿದೆ. ಶುಕ್ರವಾರ ರಾತ್ರಿಯಿಂದ ಬೆಳಿಗ್ಗೆವರೆಗೆ ಉತ್ತಮ ಮಳೆಯಾಯಿತು. ಶನಿವಾರ ಸಹ ತುಂತುರು ಮಳೆಯ ಜೊತೆಗೆ ಧಾರಾಕಾರವಾಗಿ ಮಳೆಯಾಯಿತು. ವಾಹನ, ಜನ ಸಂಚಾರ ಅಸ್ತವ್ಯಸ್ತಗೊಂಡಿದೆ.

ಮಳೆಯಿಂದಾಗಿ ಸುತ್ತಮುತ್ತಲಿನ ಗ್ರಾಮದ ಜನ ಪಟ್ಟಣದತ್ತ ಧಾವಿಸುತ್ತಿಲ್ಲ. ಇದರಿಂದ ವ್ಯಾಪಾರ ವಹಿವಾಟಿನಲ್ಲೂ ಕೊಂಚ ಇಳಿಮುಖಗೊಂಡಿದೆ. ಈ ಮಧ್ಯೆ ಚಳಿ ಗಾಳಿ ಬೀಸುತ್ತಿರುವುದರಿಂದ ಜನ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.

ADVERTISEMENT

ಕೊಡಗರಹಳ್ಳಿ, ಮಾದಾಪುರ, ಕೆದಕಲ್, ಹರದೂರು, ಕಂಬಿಬಾಣೆ, ನಾಕೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲೂ ಶನಿವಾರ ಮಳೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.