ಸುಂಟಿಕೊಪ್ಪ: ಸಮೀಪದ ಗುಂಡುಗುಟ್ಟಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸ್ಥಳೀಯ ಮುತ್ತಿನ ತೋಟದ ಮಾಲೀಕ ರಾಜೇಂದ್ರ ಹಾಗೂ ಸಾಧನಾ ಅವರು ಟ್ರ್ಯಾಕ್ ಸೂಟ್ ಅನ್ನು ನೀಡಿದರು. ಮುತ್ತಿನ ತೋಟದ ವ್ಯವಸ್ಥಾಪಕ ಪ್ರದೀಪ್ ಅವರು ಮಕ್ಕಳಿಗೆ ಸಮವಸ್ತ್ರ ವಿತರಿಸಿದರು.
ಇದೇ ವೇಳೆ ಮಾತನಾಡಿದ ರಾಜೇಂದ್ರ ಅವರು, ‘ಈ ಭಾಗದಲ್ಲಿ ಕೂಲಿ ಕಾರ್ಮಿಕರ ಮಕ್ಕಳೇ ವಿದ್ಯಾಭ್ಯಾಸಕ್ಕೆ ಬರುತ್ತಿದ್ದು, ಅವರ ಭವಿಷ್ಯದ ದೃಷ್ಟಿಯಿಂದ ಮಕ್ಕಳಿಗೆ ಓದಿನಲ್ಲಿ ಇನ್ನಷ್ಟು ಆಸಕ್ತಿ ಮೂಡುವ ದೃಷ್ಟಿಯಿಂದ ಸಣ್ಣ ಸಹಾಯ ಮಾಡುತ್ತಿದ್ದೇವೆ’ ಎಂದು ರಾಜೇಂದ್ರ ತಿಳಿಸಿದರು.
ಶಾಲೆಯ ಮುಖ್ಯ ಶಿಕ್ಷಕಿ ಗೌರಮಣಿ ಮತ್ತು ಶಿಕ್ಷಕಿ ಪೂರ್ಣಿಮಾ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.