ವಿರಾಜಪೇಟೆ:‘ಸಮುದಾಯದವರ ಒಂದೆಡೆ ಸೇರಲು ಕ್ರೀಡಾಕೂಟಗಳು ಪ್ರೇರಣೆಯಾಗಿವೆ’ ಎಂದು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ತಾತಂಡ ಜ್ಯೋತಿ ಪ್ರಕಾಶ್ ಅಭಿಪ್ರಾಯಪಟ್ಟರು.
ಪಟ್ಟಣದ ಕಾವೇರಿ ಕೊಡವ ಕೇರಿ ಆಶ್ರಯದಲ್ಲಿ ಚಿಕ್ಕಪೇಟೆ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿರುವ 4ನೇ ವರ್ಷದ ಅಂತರ ಕೊಡವ ಕೇರಿ ಬ್ಯಾಡ್ಮಿಂಟನ್ ಟೂರ್ನಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕ್ರೀಡಾಪಟುಗಳು ಕೂಡ ಕ್ರೀಡಾಸ್ಫೂರ್ತಿಯಿಂದ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ನಿವೃತ್ತ ಪ್ರಾಂಶುಪಾಲ ಪಟ್ಟಡ ಪೂವಣ್ಣ ಮಾತನಾಡಿ ಸಂಘಟನಾತ್ಮಕವಾಗಿ ಚಿಂತಿಸಿದಲ್ಲಿ ಹೊಸ ಅವಿಷ್ಕಾರಗಳು ಮೂಡಿಬರುತ್ತವೆ ಎಂದರು. ಕೊಡವ ಕೇರಿಗಳ ಒಕ್ಕೂಟದ ಅಧ್ಯಕ್ಷ ಮೇಕೆರಿರ ರವಿ ಪೆಮ್ಮಯ್ಯ ಮಾತನಾಡಿ, ಕೊಡವ ಕೇರಿಗಳ ಮಧ್ಯೆ ಸಾಮರಸ್ಯ ಬೆಸೆಯಲು ಇನ್ನಷ್ಟು ಪಂದ್ಯಾಟಗಳು ನಡೆಯಬೇಕು ಎಂದರು.
ಕೇರಿಯ ಅಧ್ಯಕ್ಷ ಮೇರಿಯಂಡ ಅರಸು ಅಚ್ಚಮ್ಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೇರಿಗಳ ನಡುವೆ ಸಾಮರಸ್ಯ , ಭ್ರಾತೃತ್ವ ಬಲಗೊಳಿಸಲು ಪಂದ್ಯಾಟಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ವಿರಾಜಪೇಟೆ ಪುರಸಭೆಯ ಮುಖ್ಯಾಧಿಕಾರಿ ಪಟ್ಟೆಚೆರುವಂಡ ನಾಚಪ್ಪ ಅವರನ್ನು ಸನ್ಮಾನಿಸಲಾಯಿತು. ಟೂರ್ನಿಯ ತಾಂತ್ರಿಕ ಸಲಹೆಗಾರ ನೆರವಂಡ ಸುರೇಶ್ ಮತ್ತು ಕೇರಿಯ ಉಪಾಧ್ಯಕ್ಷ ಅಂಜಪರವಂಡ ಅನಿಲ್ ಮಂದಣ್ಣ, ಬೊಪ್ಪಂಡ ತ್ರಿಶೂಲ್ ಗಣಪತಿ, ಚೊಟ್ಟೇರ ರವಿ, ಕೇರಿಯ ಪದಾಧಿಕಾರಿಗಳು, ಕ್ರೀಡಾಪಟುಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.