ಸೋಮವಾರಪೇಟೆ: ಗಣಗೂರು ಗ್ರಾಮದಲ್ಲಿ ಕಾಡು ಹಂದಿಗಳ ಹಾವಳಿ ಹೆಚ್ಚಾಗಿದ್ದು, ಕೃಷಿ ಉತ್ಪನ್ನ ಹಾಗೂ ಗಿಡ ಮರಗಳಿಗೆ ಹಾನಿಮಾಡುತ್ತಿದ್ದು, ಒಂದೇ ತೋಟದಲ್ಲಿ ಸುಮಾರು 150ಕ್ಕೂ ಅಧಿಕ ಅಡಿಕೆ ಗಿಡಗಳನ್ನು ನಾಶಪಡಿಸಿವೆ.
ಗ್ರಾಮದ ಜಿ.ಎಸ್. ಗೌರಮ್ಮ, ಜಿ.ಎಸ್. ಚಂದ್ರಶೇಖರ್ ಅವರುಗಳಿಗೆ ಸೇರಿದ ತೋಟದಲ್ಲಿ ಹಾಕಿದ್ದ ಒಟ್ಟು 150ಕ್ಕೂ ಅಧಿಕ ಅಡಿಕೆ ಗಿಡಗಳನ್ನು ರಾತ್ರಿ ಕಾಡುಹಂದಿಗಳು ನಾಶಗೊಳಿಸಿವೆ. 400ಕ್ಕೂ ಅಧಿಕ ಅಡಿಕೆ ಗಿಡಗಳನ್ನು ನಷ್ಟಗೊಳಿಸಿದ್ದವು. ಸರ್ಕಾರಕ್ಕೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದರೂ ಈವರೆಗೆ ನಯಾಪೈಸೆ ಬಂದಿಲ್ಲ. ಈ ಬಾರಿಯೂ ಹಂದಿಗಳ ಕಾಟ ಪುನರಾವರ್ತನೆಯಾಗಿದೆ. ವನ್ಯಪ್ರಾಣಿಗಳಿಂದ ಕೃಷಿ ಬೆಳೆಗಳನ್ನು ಸಂರಕ್ಷಿಸಲು ಇಲಾಖೆಯೇ ಕ್ರಮ ಕೈಗೊಳ್ಳಬೇಕು ಎಂದು ಕೃಷಿಕ ಚಂದ್ರಶೇಖರ್ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.