ADVERTISEMENT

ನಾಪೋಕ್ಲು | ಕಾಡಾನೆಗಳ ದಾಂಧಲೆ: ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 13:07 IST
Last Updated 30 ಜೂನ್ 2025, 13:07 IST
ನಾಪೋಕ್ಲು ಕಿರುoದಾಡು ಗ್ರಾಮದ  ಕಲಿಯಂಡ ಪೂವಣ್ಣ ಅವರ ತೋಟದಲ್ಲಿ ದಾಳಿ ನಡೆಸಿರುವ ಕಾಡಾನೆಗಳ ಹಿಂಡು ಬಾಳೆ ಗಿಡಗಳನ್ನು ಧ್ವಂಸಗೊಳಿಸಿವೆ 
ನಾಪೋಕ್ಲು ಕಿರುoದಾಡು ಗ್ರಾಮದ  ಕಲಿಯಂಡ ಪೂವಣ್ಣ ಅವರ ತೋಟದಲ್ಲಿ ದಾಳಿ ನಡೆಸಿರುವ ಕಾಡಾನೆಗಳ ಹಿಂಡು ಬಾಳೆ ಗಿಡಗಳನ್ನು ಧ್ವಂಸಗೊಳಿಸಿವೆ    

ನಾಪೋಕ್ಲು: ಸಮೀಪದ ಕಿರುoದಾಡು ಗ್ರಾಮದ ತೋಟಗಳಲ್ಲಿ ಕಾಡಾನೆಗಳು ದಾಂಧಲೆ ಮಾಡಿ ಅಪಾರ ಕೃಷಿ ಗಿಡಗಳನ್ನು ಧ್ವಂಸ ಮಾಡಿವೆ.

ಕಾಡಾನೆಗಳ ಹಿಂಡು ತೋಟಗಳಲ್ಲಿ ದಾಂಧಲೆ ನಡೆಸಿದ್ದರಿಂದ ತೆಂಗು ,ಅಡಿಕೆ, ಕಾಫಿ ,ಬಾಳೆ ಗಿಡಗಳು ನಾಶವಾಗಿ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಪಾರಾಣೆ ಗ್ರಾಮ ಪಂಚಾಯಿತಿ ಕಿರುoದಾಡು ಗ್ರಾಮದ ಕಲಿಯಂಡ ಪೂವಣ್ಣ ಅವರ ತೋಟಗಳಲ್ಲಿ ದಾಳಿ ನಡೆಸಿರುವ ಕಾಡಾನೆಗಳ ಹಿಂಡು 3 ತೆಂಗು, ಸುಮಾರು 60 ಅಡಿಕೆ ಗಿಡ, ಕಾಫಿ, ಬಾಳೆಲೆ ಸೇರಿದಂತೆ ಅಪಾರ ಕೃಷಿ ಗಿಡಗಳನ್ನು ಧ್ವಂಸಗೊಳಿಸಿ ಫಸಲುಗಳಿಗೆ ಹಾನಿ ಉಂಟು ಮಾಡಿದೆ.

ADVERTISEMENT

ಕಿರುoದಾಡು ಕೈಕಾಡು ಗ್ರಾಮದ ಕೆ.ಡಿ ಮೋಹನ್, ಹಂಸ, ಅಬ್ದುಲ್ಲಾ ಸೇರಿದಂತೆ ಇನ್ನಿತರ ಬೆಳೆಗಾರರ ತೋಟಗಳಲ್ಲಿ ಕೃಷಿ ಗಿಡಗಳನ್ನು ಕಾಡಾನೆಗಳು ಹಾಳುಗೆಡವಿವೆ. ನಷ್ಟಕ್ಕೆ ಒಳಗಾದ ರೈತರಿಗೆ ಸೂಕ್ತ ನಷ್ಟ ಪರಿಹಾರವನ್ನು ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.