ADVERTISEMENT

ಆತಿಥೇಯ ಚೆಕ್ಕೇರ ಮಹಿಳಾ ತಂಡಕ್ಕೆ ಗೆಲುವು

ಚೆಕ್ಕೇರ ಕಪ್ ಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿ

​ಪ್ರಜಾವಾಣಿ ವಾರ್ತೆ
Published 10 ಮೇ 2025, 8:11 IST
Last Updated 10 ಮೇ 2025, 8:11 IST
ಗೋಣಿಕೊಪ್ಪಲು ಬಳಿ ಹುದಿಕೇರಿಯಲ್ಲಿ ನಡೆಯುತ್ತಿರುವ ಚೆಕ್ಕೇರ ಕಪ್ ಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿಯ ಶುಕ್ರವಾರದ ಪಂದ್ಯದಲ್ಲಿ ಚೆಕ್ಕೇರ ಮತ್ತು ಮಚ್ಚಮಾಡ ತಂಡಗಳು ಸೆಣೆಸಾಡಿದವು
ಗೋಣಿಕೊಪ್ಪಲು ಬಳಿ ಹುದಿಕೇರಿಯಲ್ಲಿ ನಡೆಯುತ್ತಿರುವ ಚೆಕ್ಕೇರ ಕಪ್ ಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿಯ ಶುಕ್ರವಾರದ ಪಂದ್ಯದಲ್ಲಿ ಚೆಕ್ಕೇರ ಮತ್ತು ಮಚ್ಚಮಾಡ ತಂಡಗಳು ಸೆಣೆಸಾಡಿದವು   

ಗೋಣಿಕೊಪ್ಪಲು: ಹುದಿಕೇರಿ ಜನತಾ ಪ್ರೌಢಶಾಲೆ ಮೈದಾನದಲ್ಲಿ ನಡೆಯುತ್ತಿರುವ ಚೆಕ್ಕೇರ ಕಪ್ ಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿಯ ಶುಕ್ರವಾರದ ಪಂದ್ಯದ ಮಹಿಳಾ ವಿಭಾಗದಲ್ಲಿ ಆತಿಥೇಯ ಚೆಕ್ಕೇರ ತಂಡ ಮಚ್ಚಮಾಡ ತಂಡವನ್ನು 9 ವಿಕೆಟ್‌‌‌ಗಳಿಂದ ಸೋಲಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿತು.

ಮೊದಲು ಬ್ಯಾಟಿಂಗ್ ನಡೆಸಿದ ಮಚ್ಚಮಾಡ ತಂಡ ನಿಗದಿತ 6 ಓವರ್‌‌‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 34ರನ್ ಗಳಿಸಿತು. ಸುಲಭ ಗುರಿ ಬೆನ್ನತ್ತಿದ ಚೆಕ್ಕೇರ ತಂಡ ಕೇವಲ 3.2 ಓವರ್‌‌‌ನಲ್ಲಿ 1 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.

ಮಾಚಿಮಂಡ ತಂಡ ಮೊಣ್ಣಂಡ ತಂಡವನ್ನು 40 ರನ್ ಗಳಿಂದ ಸೋಲಿಸಿತು. ಮಹಿಳಾ ವಿಭಾಗದಲ್ಲಿ ಮಾಳೇಟೀರ (ಕೆದಮಳ್ಳೂರು) ತಂಡ ಚಿಮ್ಮಣಮಾಡ ತಂಡದ ವಿರುದ್ಧ 76 ರನ್ ಗಳ ಭಾರಿ ಅಂತರದಿಂದ ಜಯಗಳಿಸಿತು.

ADVERTISEMENT

ಪುರುಷರ ವಿಭಾಗ: ಪುರುಷರ ವಿಭಾಗದಲ್ಲಿ ಮಚ್ಚಮಾಡ ತಂಡ ಚೀಕಂಡ ತಂಡವನ್ನು 19 ರನ್‌‌‌ಗಳಿಂದ ಸೋಲಿಸಿತು. ಬೊಳಂದಂಡ ತಂಡ 6 ವಿಕೆಟ್‌‌‌ಗಳಿಂದ ಇಟ್ಟೀರ ತಂಡದ ವಿರುದ್ಧ ಜಯಗಳಿಸಿತು.

ಕಾಳಿಮಾಡ ತಂಡ ಕಾಟಿಮಾಡ ತಂಡವನ್ನು 8 ವಿಕೆಟ್‌‌‌ಗಳಿಂದ, ನೆರವಂಡ ತಂಡ ಮಾಚಿಮಂಡ ತಂಡವನ್ನು 9 ವಿಕೆಟ್‌‌‌ಗಳಿಂದ ಮಲ್ಲೇಂಗಡ ತಂಡ ಕುಟ್ಟಂಡ ತಂಡವನ್ನು 15ರನ್‌‌‌‌‌ಗಳಿಂದ, ಕರಿನೆರವಂಡ ತಂಡ ಕರ್ತಮಾಡ ತಂಡವನ್ನು 9 ವಿಕೆಟ್‌‌‌ಗಳಿಂದ ಸೋಲಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.