ADVERTISEMENT

ಆದಾಯೋತ್ಪನ್ನ ಚಟುವಟಿಕೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2011, 8:50 IST
Last Updated 4 ಜೂನ್ 2011, 8:50 IST

ಬಂಗಾರಪೇಟೆ: ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ನೀಡಲಾಗುವ ಅನುದಾನವನ್ನು ಕೆರೆ ಬಳಕೆದಾರರ ಸಂಘದ ಫಲಾನುಭವಿಗಳು ಸದ್ಬಳಕೆ ಮಾಡಿಕೊಳ್ಳುವಂತೆ ಶಾಸಕ ಎಂ.ನಾರಾಯಣಸ್ವಾಮಿ ಸಲಹೆ ನೀಡಿದರು.

ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ಆಯ್ಕೆಯಾದ ಫಲಾನುಭವಿಗಳಿಗೆ ಸುತ್ತುನಿಧಿ ಚೆಕ್ ವಿತರಿಸಲು ಜಲ ಸಂವರ್ಧನೆ ಯೋಜನಾ ಸಂಘವು ಬಂಗಾರಪೇಟೆಯ ಕಾಮಸಮುದ್ರದಲ್ಲಿ ಇತ್ತೀಚೆಗೆ  ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂಘದ ವತಿಯಿಂದ ಅಭಿವೃದ್ಧಿಗೊಳಿಸುತ್ತಿರುವ ಜಿಲ್ಲಾ ಪಂಚಾಯಿತಿ ಕೆರೆಗಳಿಗೆ ರೂ 1ಲಕ್ಷ, ಸಣ್ಣ ನೀರಾವರಿ ಕೆರೆಗಳಿಗೆ ರೂ 1,50, ಲಕ್ಷವನ್ನು ನೀಡುತ್ತದೆ. ಅದನ್ನು ಬಳಸಿ ಆದಾಯ ಹೆಚ್ಚಿಸಿಕೊಳ್ಳಬೇಕು ಎಂದರು.

ತಾಲ್ಲೂಕಿನ 19 ಕೆರೆ ಬಳಕೆದಾರರ ಸಂಘಗಳಿಂದ ಆಯ್ಕೆಯಾದ 370 ಫಲಾನುಭವಿಗಳಿಗೆ ಒಟ್ಟು ರೂ 18.5 ಲಕ್ಷ ಮೌಔಲ್ಯದ ಸುತ್ತುನಿಧಿ ಚೆಕ್ಕನ್ನು ಅವರು ವಿತರಿಸಿದರು.

ಕಾಮಸಮುದ್ರ ಹೋಬಳಿಯ ವ್ಯಾಪ್ತಿಯಲ್ಲಿ 18 ಜಿಲ್ಲಾ ಪಂಚಾಯಿತಿ ಕೆರೆಗಳು ಹಾಗೂ 1 ಸಣ್ಣ ನೀರಾವರಿ ಇಲಾಖೆಯ ಕೆರೆಯನ್ನು ಅಭಿವೃದ್ಧಿ ಪಡಿಸಲು ಆಯ್ಕೆ ಮಾಡಲಾಗಿದೆ. ಜಿ.ಪಂ. ಕೆರೆಗಳಿಗೆ ತಲಾ ರೂ 1 ಲಕ್ಷ ಮತ್ತು ಸಣ್ಣ ನೀರಾವರಿ ಇಲಾಖೆ ಕೆರೆಗಳಿಗೆ ರೂ 1.5 ಲಕ್ಷವನ್ನು ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ನೀಡಲಾಗುತ್ತಿದೆ ಎಂದರು.

ಹಣವನ್ನು ಉಪಕಸುಬುಗಳಾದ ಕುರಿಸಾಕಾಣಿಕೆ, ಹೈನುಗಾರಿಕೆ, ಸಣ್ಣ ಅಂಗಡಿ, ಮೆಣದಬತ್ತಿ, ಸಾಬೂನು ತಯಾರಿಕೆ, ಹಪ್ಪಳ ಸಂಡಿಗೆ ತಯಾರಿಕೆ, ಉಪ್ಪಿನಕಾಯಿ ತಯಾರಿಸುವುದು ಹಾಗೂ ಟೈಲರಿಂಗ್‌ನಂತಹ ಸಣ್ಣ ಉದ್ದಿಮೆ ಸ್ಥಾಪನೆಗೆ ಬಳಸಿ ಆರ್ಥಿಕವಾಗಿ ಸದೃಢ ರಾಗಬೇಕು ಎಂದರು.

ಸಂಘದ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ವಿ.ಟಿ. ಚಂಗಲರಾಯಗೌಡ ಮಾತನಾಡಿದರು.
ಸಂಘದ ಸಹಾಯಕ ಕಾರ್ಯಪಾಲಕ ಎಂಜಿ ನಿಯರ್ ಕೆ.ಎಸ್.ಎಸ್. ಮೂರ್ತಿ, ಕಾಮಸಮುದ್ರ ಗ್ರಾ. ಪಂ. ಅಧ್ಯಕ್ಷ ವೆಂಕಟೇಶಪ್ಪ, ಉಪಾಧ್ಯಕ್ಷ ವಿ. ನಾರಾಯಣಸ್ವಾಮಿ,  ಸದಸ್ಯ ಶ್ರೀನಿವಾಸ್. ಜಿ., ಗುಲ್ಲಹಳ್ಳಿ ತಾ.ಪಂ.ಅಧ್ಯಕ್ಷ ವೆಂಕಟೇಶ್, ಗ್ರಾಮ ಪಂಚಾಯಿತಿ ಸದ್ಯಸ ಪಾಪಯ್ಯ, ತಾಲ್ಲೂಕು ಪಂಚಾಯತಿ ಸದಸ್ಯ ರೇಣಕಾ ಬಾಲಚಂದರ್, ಮುಖಂಡರಾದ ಸೀತಾರಾಮಯ್ಯ, ಸಯ್ಯದ್ ಲಥೀಪ್, ಜೆ.ಪಿ. ಶ್ರೀನಿವಾಸ್, ಗುಲ್ಲಹಳ್ಳಿ ತಾ.ಪಂ. ಸದ್ಯಸ ವೆಂಕಟೇಶ್, ಸಮೂಹ ಮಾರ್ಗದರ್ಶನ ತಂಡದ ಸಿಬ್ಬಂದಿ, ಜಿಲ್ಲಾ ಯೋಜನಾ ಘಟಕದ ಸಿಬ್ಬಂದಿ, ಕೆರೆ ಬಳಕೆದಾರರ ಸಂಘದ ಪದಾಧಿಕಾರಿ ಹಾಜರಿದ್ದರು.

ಘಟಕದ ಸ್ಥಾನಿಕ ಸಾಮಾಜಿಕ ತಜ್ಞ ಆನಂದ್ ಸ್ವಾಗತಿಸಿದರು. ಕುಮಾರಿ ಅಂಥೋಣಿ ಮೇರಿ ಅಮ್ಮಾಳ್ ನಿರೂಪಿಸಿದರು. ಟಿ.ಎಲ್. ಮಹಲಿಂಗಪ್ಪ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.