ADVERTISEMENT

ಉತ್ತಮ ಶಿಕ್ಷಕರನ್ನು ಗುರುತಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 9:50 IST
Last Updated 13 ಸೆಪ್ಟೆಂಬರ್ 2011, 9:50 IST

ಮಾಲೂರು : ಶಿಕ್ಷಕರು ಪ್ರಾಮಾಣಿಕತೆ ಮತ್ತು ಶ್ರೇಷ್ಠತೆ ಅಂಶಗಳನ್ನು ಅಧ್ಯಯನದಲ್ಲಿ ಅಳವಡಿಸಿಕೊಂಡು ಭೋದಿಸಿದಾಗ  ವಿದ್ಯಾರ್ಥಿಗಳು ಸತ್ಪ್ರಜೆಗಳಾಗಲು ಸಾಧ್ಯ ಎಂದು ಬಾಪೂಜಿ ವಿದ್ಯಾ ಸಂಸ್ಥೆಯ ಗೌರವ ಅಧ್ಯಕ್ಷ ಎಂ.ವಿ. ಹನುಮಂತಯ್ಯ ಅಭಿಪ್ರಾಯ ಪಟ್ಟರು.

ಸೋಮವಾರ ಪಟ್ಟಣದ ಹೊರ ವಲಯದ ಬಾಪೂಜಿ  ಡಿಇಡಿ ಕಾಲೇಜಿ ನಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾ ಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಷ್ಟ್ರದ ಅಭಿವೃದ್ಧಿಗೆ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಇಂದಿನ ಮಕ್ಕಳಿಗೆ ಶಿಕ್ಷಕರು ನೀತಿ ಮತ್ತು ಸನ್ಮಾರ್ಗದ ಬಗ್ಗೆ ಭೋದನೆ ನೀಡಬೇಕಾಗಿದೆ ಎಂದರು.

ಇದೇ ಸಂದರ್ಭದಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಮಾಸ್ತಿ ಕೃಷ್ಣಪ್ಪ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಸಿದ್ದಪ್ಪ, ವೆಂಕಟಸ್ವಾಮಿ, ಹಾಗೂ ಕೆಂಪಯ್ಯ  ಅವರನ್ನು ಸನ್ಮಾನಿಸಲಾಯಿತು.

 ಪ್ರಶಸ್ತಿ ಸ್ವೀಕರಿಸಿದ ಶಿಕ್ಷಕ ಮಾಸ್ತಿ ಕೃಷ್ಣಪ್ಪ,  ಉತ್ತಮ ಶಿಕ್ಷಕರನ್ನು ಆಯ್ಕೆ ಮಾಡುವ ಕೆಲಸವನ್ನು ಸರ್ಕಾರ ಹಾಗೂ ಸಮಾಜವು ವಹಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಂಸ್ಥೆ ಕಾರ್ಯದರ್ಶಿ ರುದ್ರಪ್ಪ, ನಿರ್ದೇಶಕ ವೆಂಕಟಸ್ವಾಮಿ, ಶಿಕ್ಷಕ ಸಿದ್ದಪ್ಪ, ವೆಂಕಟಸ್ವಾಮಿ, ಕೆಂಪಯ್ಯ, ಬಿಆರ್‌ಸಿ ವಿಜಯಕುಮಾರ್, ಸಿಆರ್‌ಸಿ ಹೊನ್ನಕಟ್ಟಿ, ಮುಖ್ಯ ಶಿಕ್ಷಕ ವೆಂಕಟರಮಣಪ್ಪ ಇದ್ದರು. ಶಿಕ್ಷಕ ಪ್ರಕಾಶ್‌ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.