ADVERTISEMENT

ಕೆಸರಗೆರೆ ಗ್ರಾಮಕ್ಕೆ ಆರೋಗ್ಯ ಕೇಂದ್ರ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 9:35 IST
Last Updated 11 ಫೆಬ್ರುವರಿ 2012, 9:35 IST

ಮಾಲೂರು: ಕೆಸರಗೆರೆ ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಿರುವ ರೂ.13 ಲಕ್ಷ ವೆಚ್ಚದ ಉಪ ಆರೋಗ್ಯ ಕೇಂದ್ರಕ್ಕೆ ತಾ.ಪಂ.ಸದಸ್ಯ ಕೆ.ಆರ್.ಗೋಪಾಲ ಗೌಡ ಚಾಲನೆ ನೀಡಿದರು.

ಗಡಿಭಾಗದ ಕೆಸರಗೆರೆ ಬಿಟ್ನಹಳ್ಳಿ, ಅಗ್ರಹಾರ, ಗಂಗಸಂದ್ರ ಸೇರಿದಂತೆ 20ಕ್ಕೂ ಹೆಚ್ಚು ಗ್ರಾಮದ ಜನತೆಗೆ ಅನು ಕೂಲವಾಗಲಿದೆ ಎಂದು ಗೋಪಾಲ ಗೌಡ ಹೇಳಿದರು.

ಎಪಿಎಂಸಿ ಅಧ್ಯಕ್ಷ ಕೆ.ಆರ್.ಬೀರೇ ಗೌಡ, ಮಾಸ್ತಿ ಗಾಮ ಪಂಚಾಯಿತಿ ಅಧ್ಯಕ್ಷ ಕೆ.ಆರ್.ಕೃಷ್ಣೇಗೌಡ, ಮುಖಂ ಡರಾದ  ಕೆ.ಆರ್.ಆಂಜನೇಯ ಗೌಡ,  ಕೆ.ಎಚ್.ಕೃಷ್ಣ ಕುಮಾರ್, ವಿ.ಹನು ಮಪ್ಪ, ಟಿ.ಗೋಪಾಲಪ್ಪ, ಕೆ.ಎ.ರಂಗ ನಾಥ್, ಆಂಜನಪ್ಪ, ಕೆ.ಎಂ.ವೆಂಕಟ ಸ್ವಾಮಿ ಮತ್ತಿತರರು ಹಾಜರಿದ್ದರು.

`ಜನರೇ ಬುದ್ಧಿ ಕಲಿಸಲಿ~
ಚಿಂತಾಮಣಿ: ವಿಧಾನಸೌಧದಲ್ಲಿ ಅಶ್ಲೀಲ ಚಿತ್ರ ನೋಡುವುದರಲ್ಲಿ ಮಗ್ನ ರಾಗಿದ್ದ ಲಕ್ಷ್ಮಣ ಸವದಿ, ಸಿ.ಸಿ. ಪಾಟೀಲ್ ಮತ್ತು ಕೃಷ್ಣ ಪಾಲೇಮಾರ್ ಅವರನ್ನು ರಾಜಕೀಯದಿಂದ ದೂರ ವಿಡುವ ಮೂಲಕ ಜನತೆ ಪಾಠ ಕಲಿಸಬೇಕು ಎಂದು ಮಾಜಿ ಸಚಿವ ಕೆ.ಎಂ.ಕೃಷ್ಣಾರೆಡ್ಡಿ ಈಚೆಗೆ ಪತ್ರಿ ಕಾಗೋಷ್ಠಿಯಲ್ಲಿ ಹೇಳಿದರು.

ರಾಜ್ಯದ ಜನತೆಗೆ ಈಗಲಾದರೂ ಎಚ್ಚೆತ್ತು ತಾವು ಆರಿಸಿದ ಜನಪ್ರತಿನಿಧಿ ಗಳ ಬಗ್ಗೆ ಆತ್ಮಾವಲೋಕನ ಮಾಡಿ ಕೊಳ್ಳಬೇಕು. ಅಶ್ಲೀಲ ಚಿತ್ರ ವೀಕ್ಷಣೆ ದುರದೃಷ್ಟ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT