ADVERTISEMENT

ಜಾಗತೀಕರಣ ಪ್ರಭಾವದಿಂದ ಭಾಷೆ ರಕ್ಷಿಸಿ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2012, 5:10 IST
Last Updated 13 ನವೆಂಬರ್ 2012, 5:10 IST

ಮುಳಬಾಗಲು: ಜಾಗತೀಕರಣದ ಮಾರಕ ಪ್ರಭಾವದಿಂದ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ರಕ್ಷಿಸಬೇಕಿದೆ ಎಂದು ವಿಮರ್ಶಕ ಡಾ.ಚಂದ್ರಶೇಖರ್ ನಂಗಲಿ ಆಭಿಪ್ರಾಯಪಟ್ಟರು.

ತಾಲ್ಲೂಕಿನ ನಂಗಲಿ ಗ್ರಾಮದಲ್ಲಿ ಶನಿವಾರ ಗಡಿನಾಡ ಕನ್ನಡ ಮಿತ್ರರ ಬಳಗ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಕನ್ನಡ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭ ಉದ್ಫಾಟಿಸಿ ಮಾತನಾಡಿ, ಭಾಷೆ, ಸಂಸ್ಕೃತಿ, ಪರಿಸರಗಳು ಜನರ ಮೇಲೆ ನಿರಂತರ ಪ್ರಭಾವ ಬೀರುತ್ತಿರುತ್ತವೆ. ನಾಡಿನ ಆಂತರಿಕ ಚೈತನ್ಯದ ಕುರುಹುಗಳಂತೆ ಪಾತ್ರ ನಿರ್ವಹಿಸುತ್ತವೆ ಎಂದರು.

ಕಳೆದ 20 ವರ್ಷದ ಆವಧಿಯಲ್ಲಿ ಜಾಗತೀಕರಣದಿಂದ ಕನ್ನಡವೂ ಸೇರಿದಂತೆ ಹಲವು ದೇಶೀಯ ಭಾಷೆ, ಸಂಸ್ಕೃತಿಗಳು ತಮ್ಮ ಕುರಹು ಕಳೆದುಕೊಂಡಿವೆ. ಕನ್ನಡ ಉಳಿಸಿ ಬೆಳಸುವ ಕಾರ್ಯವನ್ನು ಕನ್ನಡಿಗರು ಕೈಗೆತ್ತಿಕೊಳ್ಳಬೇಕು ಎಂದು ಹೇಳಿದರು.

ಚಲನಚಿತ್ರ ನಿರ್ಮಾಪಕ, ಲೇಖಕ ಕೋಡ್ಲು ರಾಮಕೃಷ್ಣ ಅವರನ್ನು ಸನ್ಮಾನಿಸಲಾಯಿತು. ಗಡಿನಾಡು ಕನ್ನಡ ಮಿತ್ರರ ಸಂಘದ ಅಧ್ಯಕ್ಷ ವಿ.ಆರ್.ಪ್ರಭಾಕರಗುಪ್ತ, ಜಿಲ್ಲಾ ಕಸಾಪ ಅಧ್ಯಕ್ಷ ಜೆ.ಜಿ.ನಾಗರಾಜ್, ನಂಗಲಿ ಗ್ರಾ.ಪಂ. ಅಧ್ಯಕ್ಷೆ ನಾಜೀಮಾತಾಜ್, ನಿವೃತ್ತ ಶಿಕ್ಷಣಾಧಿಕಾರಿ ಚಾಂದ್‌ಪಾಷ, ತಾಲ್ಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಕನ್ನಡ ಭಟ ವೆಂಕಟಪ್ಪ, ರೋಟರಿ ಅಧ್ಯಕ್ಷ ಡಾ.ಕೆ.ವಿ.ಪುರುಷೋತ್ತಂ, ನೆಹರು ಯುವ ಕೇಂದ್ರದ ಅಧಿಕಾರಿ ಇ.ನಾರಾಯಣಗೌಡ, ಜಿ.ಮಧುಸೂಧನ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.