ADVERTISEMENT

ದೋಷರಹಿತ ಮತದಾರರ ಪಟ್ಟಿ ತಯಾರಿಕೆ: ಸೂಚನೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2013, 8:37 IST
Last Updated 10 ಡಿಸೆಂಬರ್ 2013, 8:37 IST

ಮುಳಬಾಗಲು: ವಿಧಾನಸಭೆ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ 2,726 ಮತ­ದಾರರು ಎಂಬತ್ತು ವರ್ಷಕ್ಕೂ ಮೇಲ್ಪಟ್ಟ­ವರೆಂದು ಹಾಗೂ 87 ಪ್ರಕರಣಗಳಲ್ಲಿ ತಂದೆ ಅಥವಾ ಪತಿಯ ಸಂಬಂಧ ನಮೂ­ದಾಗಿಲ್ಲ ಎಂದು ಚುನಾವಣೆ ತಹಶೀಲ್ದಾರ್ ಇ.ಬಾಲಕೃಷ್ಣಪ್ಪ ನುಡಿ­ದರು.

ಪಟ್ಟಣದ ಮಿನಿವಿಧಾನಸೌಧದಲ್ಲಿ ಸೋಮವಾರ ಬೂತ್‌ ಮಟ್ಟದ (ಬಿಎಲ್ಒ) ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ದೋಷರಹಿತ ಮತ­ದಾರರ ಪಟ್ಟಿಯನ್ನು ತಯಾರಿಸಲು ಸಿಬ್ಬಂದಿ ಶ್ರಮಿಸಬೇಕು ಎಂದರು.

ಇಪ್ಪತೈದು ವರ್ಷ ಮೇಲ್ಪಟ್ಟ ಮದುವೆ­ಯಾದ ಹೆಣ್ಣುಮಕ್ಕಳು ಪತಿಯ ಹೆಸರು ನಮೂದಿಸುವ ಕುರಿತು ತಿಳಿಹೇಳಬೇಕು. ಒಂದಕ್ಕಿಂತ ಹೆಚ್ಚು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ದಾಖಲಾಗಿದ್ದರೆ ಅದು ಅಪರಾಧ. ಅಂಥವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಗುವುದು. ಹೆಸರು, ವಯಸ್ಸಿನ ವಿವರಗಳಲ್ಲಿ ದೋಷಗಳಿದ್ದಲ್ಲಿ ಸರಿಪಡಿಸಬೇಕು ಎಂದರು.

ಚುನಾವಣೆ ಉಪತಹಶೀಲ್ದಾರ್‌ ಸೂಲಯ್ಯ, ಆರು ಸಾವಿರಕ್ಕೂ ಹೆಚ್ಚು ಮಂದಿ ಮತದಾರರ ಪಟ್ಟಿ ಹೆಸರು ಸೇರ್ಪಡೆಗೆ  ಅರ್ಜಿ ಸಲ್ಲಿಸಿದ್ದಾರೆ. ಆ ಪೈಕಿ ಮೂರು ಸಾವಿರ ಮಂದಿಯನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದರು. ತಹಶೀಲ್ದಾರ್‌ ಡಿ.ವಿ.ರಾಮ­ಮೂರ್ತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.