ADVERTISEMENT

ಪಕ್ಷೇತರನಾಗಿಯೇ ಇರುವೆ: ವರ್ತೂರು

​ಪ್ರಜಾವಾಣಿ ವಾರ್ತೆ
Published 21 ಜನವರಿ 2011, 9:00 IST
Last Updated 21 ಜನವರಿ 2011, 9:00 IST

ಕೋಲಾರ: ‘ಮುಂದಿನ ಚುನಾವಣೆಯಲ್ಲಿ ನಾನು ಯಾವ ಪಕ್ಷಕ್ಕೂ ಹೋಗಲ್ಲ. ಸ್ವತಂತ್ರವಾಗಿಯೇ ಇದ್ದು ನನ್ನ ಬಣದ ಮುಖಂಡರ ಮತ್ತು ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡುತ್ತೇನೆ’ ಎಂದು ಶಾಸಕ ಆರ್.ವರ್ತೂರ್ ಪ್ರಕಾಶ್ ಹೇಳಿದರು.

ತಾಲ್ಲೂಕಿನ ಕಲ್ವಮಂಜಲಿಯಲ್ಲಿ ಗುರುವಾರ ಬೈರೇಗೌಡರ ಕಟ್ಟಾ ಬೆಂಬಲಿಗರಾದ ಕೆ.ಎನ್. ಚಂದ್ರೇಗೌಡ ಮತ್ತು ಎಂ.ರಾಜೇಶ್ ಸೇರಿದಂತೆ ಹಲವರನ್ನು ತಮ್ಮ ಬಣಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದ ಅವರು, ಇತರೆ ಪಕ್ಷಗಳಿಗೆ ಹೋಗುವುದಕ್ಕಿಂತ ಪಕ್ಷೇತರವಾಗಿರುವುದೇ ಉತ್ತಮ ಎನಿಸುತ್ತಿದೆ. ಕ್ಷೇತ್ರದ ಜನತೆಯ ಹಿತದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಈ ಬಗ್ಗೆ ನಿರ್ಧಾರ ಮಾಡುವೆ ಎಂದರು.

2.5 ವರ್ಷಗಳ ಅವಧಿಯಲ್ಲಿ ಗ್ರಾಮೀಣ ಭಾಗದ ಅಭಿವೃದ್ಧಿಗೆ ಸಾಕಷ್ಟು ಒತ್ತು ನೀಡಿರುವೆ. ಆದರೂ ವಿರೋಧಿಗಳು ನನ್ನ ವಿರುದ್ಧ ಜನಾಭಿಪ್ರಾಯ ರೂಪಿಸಲು ಕುತಂತ್ರ ಮಾಡುತ್ತಿದ್ದಾರೆ. ಅದು ನಿರೀಕ್ಷಿತ ಫಲಿತಾಂಶ ನೀಡುವುದಿಲ್ಲ ಎಂದರು.

ಜಿ.ಪಂ.ಸದಸ್ಯ ಜಿ.ಎಸ್.ಅಮರ್‌ನಾಥ್, ಮುಖಂಡರಾದ  ಬೆಗ್ಲಿ ಸೂರ್ಯ ಪ್ರಕಾಶ್, ಪುಟ್ಟಸ್ವಾಮಾಚಾರ್, ತಾ.ಪಂ.ಸದಸ್ಯರಾದ ಕೃಷ್ಣಾಪುರ ಶ್ರೀನಿವಾಸ್, ನಾಗರಾಜ್, ವಿ.ಮಂಜುನಾಥ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರಾದ ಯಶೋಧಮ್ಮ, ಜಂಭಾಪುರ ವೆಂಕಟರಾಮ್, ಕೃಷ್ಣೇಗೌಡ, ಮುಖಂಡರಾದ ಬೆಟ್ಟಹೊಸಪುರ ಶ್ರೀನಿವಾಸ್, ಕೋಳಿರಾಮು, ತಿಪ್ಪೇನಹಳ್ಳಿಯ ರಾಮಕೃಷ್ಣಪ್ಪ, ನಾಗೇಶ್, ಸುಬ್ಬಾರೆಡ್ಡಿ ಹಾಜರಿದ್ದರು.

ಕೆ.ಎನ್.ಚಂದ್ರೇಗೌಡ, ಎಂ.ರಾಜೇಶ್, ಟಿ.ಕೆ.ಬೈರೇಗೌಡ, ಕೆ.ಆರ್.ನಾರಾಯಣಸ್ವಾಮಿ, ಕೆ. ಸೊಣ್ಣಪ್ಪ, ಬಿ.ನಾರಾಯಣಸ್ವಾಮಿ, ನಾರಾಯಣಗೌಡ, ಚನ್ನರಾಯಪ್ಪ, ಎಂ.ಬೈರೇಗೌಡ, ಎನ್. ನಾಗರಾಜ್, ಮುನಿಶಾಮಿಗೌಡ, ನಟರಾಜ್, ಆಂಜಿನಪ್ಪ, ಅಯ್ಯಣ್ಣ, ಮುನಿಕೃಷ್ಣಪ್ಪ, ಚಂದ್ರಶೇಖರ್, ಗೋಪಾಲಗೌಡ, ರಾಮಪ್ಪ, ಕೆ.ಪಿ.ಕೃಷ್ಣಪ್ಪ, ಎಚ್.ಮುನಿಯಪ್ಪ, ಶ್ರೀರಾಮಪ್ಪ, ನಾರಾಯಣಪ್ಪ, ದೇವರಾಜ್, ನಾಗರಾಜ್, ಚಂದ್ರಪ್ಪ, ಮಂಜುನಾಥ್, ಗಂಗಪ್ಪ, ವೆಂಕಟೇಶ್, ಮುನಿಯಪ್ಪ, ಎಚ್. ನಾರಾಯಣಸ್ವಾಮಿ ಶಾಸಕರ ಬಣಕ್ಕೆ ಸೇರ್ಪಡೆಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.