ADVERTISEMENT

ಮಕ್ಕಳ ಪ್ರತಿಭೆ ಗುರುತಿಸಲು ಶಿಕ್ಷಕರಿಗೆ ಕರೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2011, 7:05 IST
Last Updated 12 ಫೆಬ್ರುವರಿ 2011, 7:05 IST

ಮುಳಬಾಗಲು: ಮಕ್ಕಳ ಪ್ರತಿಭೆ ಗುರುತಿಸಿ ಬೆಳೆಸಬೇಕು ಎಂದು ಕೊತ್ತೂರು ಮಂಜುನಾಥ್  ಕರೆ ನೀಡಿದರು.ಪಟ್ಟಣದ  ಮುತ್ಯಾಲಪೇಟೆ ಎಸ್‌ಎಲ್‌ವಿ ಶಾಲೆ ವಾರ್ಷಿಕೋತ್ಸವ ಮತ್ತು ಪೋಷಕರ ದಿನಾಚರಣೆ ಉದ್ಪಾಟಿಸಿ ಮಾತನಾಡಿ, ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಮಹತ್ವ ನೀಡಬೇಕು ಎಂದರು.

ತಿಮ್ಮರಾವುತನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಎ.ವಿ.ಸುಬ್ರಮಣ್ಯಂ, ಜಗಮೋಹನ್‌ರೆಡ್ಡಿ, ವೆಂಕಟೇಶಬಾಬು. ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಜಮ್ಮನಹಳ್ಳಿ ಕೃಷ್ಣ ಮುಂತಾದವರು ಭಾಗವಹಿಸಿದ್ದರು. ಚೈತ್ರ ಸ್ವಾಗತಿಸಿದರು.
 
ಶಾಲೆಯ ವ್ಯವಸ್ಫಾಪಕ ವಿ.ಸುಬ್ರಮಣ್ಯಂ ವಂದಿಸಿದರು. ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ದೀನದಯಾಳು ಸ್ಮರಣೆ ದೀನದಯಾಳು ಉಪಾಧ್ಯಾಯ ದೇಶ ಕಂಡ ಅಪ್ರತಿಮ ದೇಶಭಕ್ತ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕನ್ನತ್ತ ಮುನಿವೆಂಕಟಪ್ಪ ಹೇಳಿದರು.
ಮುಳಬಾಗಲು ಪಟ್ಟಣದ ಕೋದಂಡರಾಮಸ್ವಾಮಿ ದೇವಾಲಯ ದಲ್ಲಿ ಬಿಜೆಪಿ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ದೀನದಯಾಳು ಸಮರ್ಪಣಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ತಾಲ್ಲೂಕು ಬಿಜೆಪಿ ಮಹಿಳಾ ಮೋರ್ಚ ಅಧ್ಯಕ್ಷೆ ಅರುಣಾನಾಗೇಶ್, ಮುಖಂಡರಾದ ಸೊನ್ನವಾಡಿ ಮುನಿರಾಜು. ಪ್ರಸಾದ್. ಕುಪ್ಪಾಚಾರಿ, ಪೆತ್ತಾಂಡ್ಲಹಳ್ಳಿ ನಾರಾಯಣಗೌಡ, ಸುರೇಶ್, ಚಂದ್ರು, ರಮೇಶ್, ನಾಗಾರ್ಜುನ, ನಾಗೇಶ್ ಭಾಗವಹಿಸಿದ್ದರು.

ದೀನದಯಾಳ್ ಆದರ್ಶ ಪಾಲಿಸಲು ಸಲಹೆಮಾಲೂರು: ದೀನ್‌ದಯಾಳ್ ಉಪಾಧ್ಯಾಯ ಅವರ ಆದರ್ಶ, ತತ್ವ- ಸಿದ್ದಾಂತಗಳನ್ನು ಇಂದಿನ ರಾಜಕಾರಣಿಗಳು ಅಳವಡಿಸಿಕೊಳ್ಳ ಬೇಕೆಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಲಕ್ಷ್ಮಯ್ಯ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಬಿಜೆಪಿ ತಾಲ್ಲೂಕು ಘಟಕ ಶುಕ್ರವಾರ ಏರ್ಪಡಿಸಿದ್ದ ದೀನದಯಾಳ್ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದಲ್ಲಿ ಕಾಂಗ್ರೆಸ್‌ಗೆ ಪರ್ಯಾಯ ವಾಗಿ ಮೊಟ್ಟಮೊದಲು 1951ರಲ್ಲಿ ಜನಸಂಘ ಪಕ್ಷವನ್ನು ದೀನದಯಾಳ್ ಪ್ರಾರಂಭಿಸಿದರು.} 1957ರಲ್ಲಿ ಜನಸಂಘ ಪಕ್ಷದ 2ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ನಿಸ್ವಾರ್ಥದಿಂದ ಶ್ರಮಿಸಿದರು ಎಂದರು.
ಜಿ.ಪಂ. ಅಧ್ಯಕ್ಷೆ ಮಂಜುಳಾ ವೆಂಕಟೇಶ್, ಸದಸ್ಯರಾದ ರಾಮಸ್ವಾಮಿರೆಡ್ಡಿ, ಯಲ್ಲಮ್ಮ, ತಾ.ಪಂ. ಸದಸ್ಯರಾದ ಎಸ್.ವಿ. ಲೋಕೇಶ್, ಗೋಪಾಲ್‌ಗೌಡ, ಪುಟ್ಟಸ್ವಾಮಿ, ಪುರಸಭಾ ಅಧ್ಯಕ್ಷೆ ಗುಲಾಬ್‌ಜಾನ್, ಉಪಾಧ್ಯಕ್ಷ ರಾಜಪ್ಪ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ಆಂಜಿನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ರಾಮಚಂದ್ರ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಚಂಬೆ ನಾರಾಯಣಗೌಡ, ಮುಖಂಡರಾದ ಕೆಸರಗೆರೆ ಬೀರೇಗೌಡ, ಎ.ಅಶ್ವಥರೆಡ್ಡಿ, ಎಂ.ಜಿ. ಮಧುಸೂಧನ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.