ADVERTISEMENT

ಮಹಾ ಚಂಡಿ ಹೋಮ, ಕುಂಭಾಭಿಷೇಕ

​ಪ್ರಜಾವಾಣಿ ವಾರ್ತೆ
Published 22 ಮೇ 2012, 7:50 IST
Last Updated 22 ಮೇ 2012, 7:50 IST

ಕೋಲಾರ: ತಾಲ್ಲೂಕಿನ ಕಿತ್ತಂಡೂರು ಗ್ರಾಮದ ಉಲ್ಲೆೀಶ್ವರಮ್ಮ ದೇವಾಲಯದಲ್ಲಿ ಈಚೆಗೆ ಮಹಾಚಂಡಿ ಹೋಮ ಮತ್ತು ಮಹಾ ಕುಂಭಾಭಿಷೇಕ ಹಮ್ಮಿಕೊಳ್ಳಲಾಗಿತ್ತು.

ಹೋಮದ ಅಂಗವಾಗಿ ದೇವಾಲಯದ ಆವರಣದಲ್ಲಿ ಅನುಘ್ನ, ಸ್ವಸ್ತಿವಾಚನ, ಗಣಪತಿ ಪೂಜೆ, ಪುಣ್ಯಾಹ, ರಕ್ಷಾ ಬಂಧನ, ಅಷ್ಟದಿಕ್ಪಾಲಕ ಪೂಜೆ, ಧ್ವಜಾರೋಹಣ, ಕಳಶಾರಾಧನೆ, ಪರಿವಾರ ದೇವತಾರಾಧನೆ, ಅಗ್ನಿ ಪ್ರತಿಷ್ಠೆ, ಮಹಾಗಣಪತಿ ಹೋಮ, ನವಗ್ರಹ ಹೋಮ, ಗ್ರಾಮದೇವತಾ ಹೋಮ ನಡೆಯಿತು.

ವಿಶೇಷವಾಗಿ ಮಹಾ ಚಂಡಿಹೋಮ, ಪ್ರಾಯಶ್ಚಿತ್ತ ಹೋಮ, ಶಾಂತಿ ಹೋಮ, ಮಹಾ ಪೂರ್ಣಾಹುತಿ, ಕಳಸ ವಿಸರ್ಜನೆ, ಆಲಯ ಪ್ರದಕ್ಷಿಣೆ, ಕುಂಭಾಭಿಷೇಕ, ಪಂಚಾಮೃತ ಅಭಿಷೇಕ, ಅಲಂಕಾರ, ಅಷ್ಟೋತ್ತರ, ಅಷ್ಟಾವಧಾನ ಸೇವೆ, ನಿವೇದನೆ, ಶಾಕ್ತುಮೊರೈ, ರಾಷ್ಟ್ರಾಶೀರ್ವಾದ ನಡೆದವು.

ಇದೇ ಸಂದರ್ಭದಲ್ಲಿ ದೇವಾಲಯದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಐಪಿಎಸ್ ಅಧಿಕಾರಿ ಎಂ.ಸಿ. ನಾರಾಯಣಗೌಡ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು. ಚಂಡಿ ಹೋಮದಲ್ಲಿ ದಂಪತಿ ಭಾಗವಹಿಸಿದ್ದು, ಪ್ರಧಾನ ಆಗಮಿಕರಾಗಿ ಕೋಲಾರದ ಜಿ.ಮಂಜುನಾಥಾಚಾರ್ ಮತ್ತು ವೃಂದದವರು ಕಾರ್ಯಕ್ರಮ ನಡೆಸಿಕೊಟ್ಟರು.

ಬೆಳಿಗ್ಗೆ 6 ಗಂಟೆಯಿಂದ ಪ್ರಾರಂಭವಾದ ದೇವತಾ ಕಾರ್ಯಕ್ರಮ ಸಂಜೆ 6 ರವರೆಗೆ ನಡೆದವು.  ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ಶ್ರೀನಿವಾಸಪುರ ತಾಲ್ಲೂಕಿನ ಬಗಳಹಳ್ಳಿಯ ಕೆ.ಸರೋಜಮ್ಮ ಹಾಗೂ ಬಿ.ಎಸ್. ನಾರಾಯಣಸ್ವಾಮಿ ಚಾರಿಟೇಬಲ್ ಟ್ರಸ್ಟ್‌ನ ಬಿ.ಎನ್. ಸುರೇಶ್‌ಬಾಬು ನೆನಪಿನ ಕಾಣಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.