ADVERTISEMENT

ಮಹಿಳೆಯರ ಚಿತ್ರ ದುರ್ಬಳಕೆ: ವಿರೋಧ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2012, 3:25 IST
Last Updated 22 ಮಾರ್ಚ್ 2012, 3:25 IST

ಕೋಲಾರ: ಒಳ ಉಡುಪುಗಳ ಮೇಲೆ ಮಹಿಳೆ ಚಿತ್ರ ಮುದ್ರಿಸಿರುವವರ ವಿರುದ್ಧ  ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಅಸೋಸಿಯೇಶನ್ ಆಫ್ ಲೋಕಲರ್ ಗೌವರ್ನೆನ್ಸ್ ಆಫ್ ಇಂಡಿಯಾ ಜಿಲ್ಲಾ ಶಾಖೆ ಪ್ರಮುಖರು ಕೋಲಾರ ಜಿಲ್ಲಾಧಿ ಕಾರಿ ಕಚೇರಿ ತಹಶೀಲ್ದಾರ್ ಸುಶೀಲಮ್ಮ ಅವರಿಗೆ ಮನವಿ ಸಲ್ಲಿಸಿದರು.

ರೈತರು ಹಲವು ಕಾರಣಗಳಿಗೆ ತಮ್ಮ ಪಾರಂಪರಿಕ ವೃತ್ತಿಯನ್ನು ತೊರೆಯುತ್ತಿ ್ದದಾರೆ. ಇಂಥ ಸಂದರ್ಭದಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ಕುಟುಂಬಗಳ ರೈತ ಮಹಿಳೆಯರನ್ನು ಸಮುದಾಯ ಗೌರವದಿಂದ ಕಂಡು ರಕ್ಷಿಸಬೇಕೇ ಹೊರತು ಅಮಾನವೀಯ ವಾಗಿ ಚಿತ್ರಿಸಬಾರದು ಎಂದು ಆಗ್ರಹಿಸಿದರು.

ಮಹಿಳೆಯನ್ನು ಉನ್ನತ ಸ್ಥಾನದಲ್ಲಿಟ್ಟು ಪೂಜಿಸುವ ಸಂಸ್ಕೃತಿಯ ದೇಶ ನಮ್ಮದು. ಆದರೆ ಇತ್ತೀಚೆಗೆ ತೆನೆ ಹೊತ್ತ ಮಹಿಳೆಯ ಚಿತ್ರವನ್ನು ಒಳ ಉಡುಪುಗಳ ಮೇಲೆ ಮುದ್ರಿಸಲಾಗಿದೆ. ಮಹಿಳೆಯರ ಚಿತ್ರವನ್ನು ರಾಜಕೀಯ ದುರುದ್ದೇಶಕ್ಕೆ ಅವಮಾನಕಾರಿಯಾಗಿ ದುರ್ಬಳಕೆ ಮಾಡಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಹಿಳೆಯರನ್ನು ಹೀನಾಯವಾಗಿ ಚಿತ್ರಿಸುವ ಕೃತ್ಯಗಳು ನಡೆಯದಂತೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ, ಪ್ರಧಾನ ಮಂತ್ರಿ, ರಾಷ್ಟ್ರಪತಿಗಳೂ ಸೇರಿದಂತೆ ಎಲ್ಲ ಪ್ರಮುಖರಿಗೂ ಮನವಿ ಸಲ್ಲಿಸಲಾ ಗುವುದು ಎಂದರು. ಶಾಖೆಯ ಉಪಾಧ್ಯಕ್ಷೆ ಎಸ್.ಶೈಲಜಾ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.