ಕೋಲಾರ: 16, 17, 18ನೇ ವಾರ್ಡ್ ಗಳಿಗೆ ಮೂಲಸೌಕರ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಎಂದು ಕೋರಿ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಘಟಕದ ಪ್ರಮುಖರು ಕೋಲಾರ ನಗರಸಭೆ ಆಯುಕ್ತೆ ಆರ್.ಶಾಲಿನಿ ಅವರಿಗೆ ಈಚೆಗೆ ಮನವಿ ಸಲ್ಲಿಸಿದರು.
ನೀರಿನ ಅಸಮರ್ಪಕ ಪೂರೈಕೆ, ಕಸ ವಿಲೇವಾರಿ ನಡೆಯದಿರುವುದು, ಚರಂಡಿಗಳನ್ನು ಸ್ವಚ್ಛಗೊಳಿಸುವ ಕೆಲಸ ನಡೆಯದಿರುವುದರಿಂದ ಜನರಿಗೆ ಹಲವು ಸಮಸ್ಯೆಗಳು ಎದುರಾಗಿವೆ. ಸಾಂಕ್ರಾಮಿಕ ರೋಗಗಳು ಹರಡುವ ಆತಂಕವೂ ಹೆಚ್ಚಿದೆ. ಈ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.
ಮಿಲ್ಲತ್ ನಗರದಲ್ಲಿ ಕೊಳವೆ ಬಾವಿ ಕೊರೆದು 8-10 ತಿಂಗಳಾದರೂ ಪಂಪ್-ಮೋಟರ್ ಅಳವಡಿಸಿಲ್ಲ. ಮುಖ್ಯ ರಸ್ತೆಗಳಲ್ಲಿ ಬೀದಿದೀಪಗಳು ಕೆಟ್ಟಿವೆ. ಆಜಾದ್ ನಗರದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ.
ಶಾದಿ ಮಹಲ್ ಪಕ್ಕದಲ್ಲಿರುವ ರಸ್ತೆಗಳಲ್ಲಿ ಚರಂಡಿ ವ್ಯವಸ್ಥೆಯೇ ಇಲ್ಲ ಎಂದು ದೂರಿದರು.
ಷಹಿನ್‌ಶಾ ನಗರ, ಕ್ಲಾಕ್ ಟವರ, ಷಹೀದ್ ನಗರ, ದರ್ಗಾಶಾಹಿ ಮೊಹಲ್ಲಾ, ಹವೇಲಿ ಮೊಹಲ್ಲಾ, ಪೂಲ್‌ಷಾ ಮೊಹಲ್ಲಾ,ಖಾಕಿ ಷಾ ಮೊಹಲ್ಲಾಗಳಲ್ಲಿಯೂ ನೀರು, ಬೀದಿ ದೀಪ, ಚರಂಡಿ ಸಮಸ್ಯೆಗಳಿವೆ.
ಕೂಡಲೇ ಕ್ರಮ ಕೈಗೊಂಡು ಪರಿಹರಿ ಸದಿದ್ದರೆ ರಸ್ತೆ ತಡೆ ಮಾಡಿ ಪ್ರತಿಭಟಿಸ ಲಾಗುವುದು ಎಂದು ತಿಳಿಸಿದರು.
ಘಟಕದ ಪ್ರಮುಖ ಯಾಸೀನ್ ಖಾನ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.