ADVERTISEMENT

ರಸ್ತೆ ಮಧ್ಯೆ ರಾಗಿ, ಹುರುಳಿ ಒಕ್ಕಣೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2016, 6:11 IST
Last Updated 30 ಜನವರಿ 2016, 6:11 IST
ಮುಳಬಾಗಲು ತಾಲ್ಲೂಕು ಆವಣಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಜಾಗ ಬಿಡದಂತೆ ರಾಗಿ ಹುಲ್ಲನ್ನು ಹಾಕಿದ ಕಾರಣ ಕೋಲಾರದ ಗೋಪಾಲ್ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನದಿಂದ ಮುಗುಚಿ ಬಿದ್ದಿರುವುದು.
ಮುಳಬಾಗಲು ತಾಲ್ಲೂಕು ಆವಣಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಜಾಗ ಬಿಡದಂತೆ ರಾಗಿ ಹುಲ್ಲನ್ನು ಹಾಕಿದ ಕಾರಣ ಕೋಲಾರದ ಗೋಪಾಲ್ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನದಿಂದ ಮುಗುಚಿ ಬಿದ್ದಿರುವುದು.   


ಮುಳಬಾಗಲು: ತಾಲ್ಲೂಕಿನಾದ್ಯಂತ ರಾಗಿ, ಹುರುಳಿಯನ್ನು ರಸ್ತೆಗಳಲ್ಲಿ ಒಕ್ಕಣೆ ಮಾಡುತ್ತಿರುವುದರಿಂದ ವಾಹನ ಸಾವರರಿಗೆ ತೊಂದರೆಯಾಗುತ್ತಿದೆ ಎಂದು ಕೋಲಾರ ಗೋಪಾಲ್ ಆರೋಪಿಸಿದರು.

ತಾಲ್ಲೂಕಿನ ಆವಣಿ ಗ್ರಾಮದಲ್ಲಿ ಈಚೆಗೆ ರಸ್ತೆಯಲ್ಲಿ ಹಾಕಿದ ರಾಗಿ ತಾಳಿನಿಂದ ದ್ವಿಚಕ್ರ ವಾಹನದಿಂದ ಮುಗುಚಿ ಬಿದ್ದು, ತೀವ್ರ ಗಾಯಗಳಾಗಿ ಆಸ್ಪತ್ರೆ ಸೇರಿರುವ ಘಟನೆ ನಡೆದಿದೆ. ರಸ್ತೆಯುದ್ದಕ್ಕೂ ಎಡೆಬಿಡದಂತೆ ರಸ್ತೆಯ ಅಗಲಕ್ಕೂ ರಾಗಿ ತಾಳಿನ ಹುಲ್ಲನ್ನು ಹಾಕ್ಕಿದ್ದರು.ದ್ವಿಚಕ್ರ ವಾಹನ ಹೋಗುವಷ್ಟು ರಸ್ತೆ ಬದಿಯಲ್ಲಿ ಜಾಗವಿಲ್ಲದ ಕಾರಣ ಹುಲ್ಲಿನ ಮೇಲೆ ಹೋಗಬೇಕಾಯಿತು.

ಇದರಿಂದ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ಬಿದ್ದು, ಕಾಲು ಮತ್ತು ಕೈಗಳಿಗೆ ಗಾಯವಾಗಿ ರಕ್ತ ಬಂತು ಎಂದು ಗೋಪಾಲ್‌ ಅಳಲು ತೋಡಿಕೊಂಡರು.

ಹಗಲು ಹೊತ್ತಿನಲ್ಲಿ ಹೇಗೋ ದಾರಿ ಮಾಡಿಕೊಂಡು ಹೋಗಬಹುದು. ಆದರೆ ರಾತ್ರಿ ಹೊತ್ತು ವಾಹನ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಒಕ್ಕಲು ಮಾಡಿದ ಹುರುಳಿ, ಭತ್ತದ ಹುಲ್ಲುನ್ನು ದಾರಿಯುದ್ದಕ್ಕೂ ಹಾಗೆ ಬಿಟ್ಟಿರುವುದರಿಂದ ರಸ್ತೆಯಲ್ಲಿ ಓಡಾಡದ ಸ್ಥಿತಿ ನಿರ್ಮಾಣವಾಗಿದೆ. ಕೂಡಲೆ ಸಂಬಂಧಿಸಿದ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಗೋಪಾಲ್ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.